Spread the love
  • ಉಡುಪಿ: ದಿನಾಂಕ 17-06-2023(ಹಾಯ್ ಉಡುಪಿ ನ್ಯೂಸ್) ಪ್ಯಾರಾ ಮೆಡಿಕಲ್ ಕಾಲೇಜು ಒಂದರ ಪ್ರಥಮ ವರ್ಷದ ವಿದ್ಯಾರ್ಥಿನಿಗೆ ಕಾಲೇಜಿನ ಸೆಕ್ರೆಟರಿ ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.
  • ಬಿಂದು ಆರ್ ಎಂಬ ಯುವತಿಯು ಸಹ್ಯಾದ್ರಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪ್ಯಾರಾ ಮೆಡಿಕಲ್ ಓದುತ್ತಿದ್ದು 12/06/2023  ರಂದು  ಕಾಲೇಜಿನಲ್ಲಿ ಟೆಸ್ಟ್  ನಡೆಯುತ್ತಿದ್ದು ಟೆಸ್ಟ್ ನಡೆಯುವಾಗ ಬಿಂದು ಆರ್ ಆಚೆ ಈಚೆ ನೋಡಿದಳು ಎಂದು ಕಾಲೇಜಿನ ಸೆಕ್ರೇಟರಿ ನಳಿನಿ ಡಿಸೋಜಾ ಎಂಬವರು ಬಿಂದುಳನ್ನು ಹೆಲ್ತ್ ಸೆಂಟೆರ್ ಗೆ ಕರೆದುಕೊಂಡು ಹೋಗಿ ಇವಳು ಉಷಾರಿಲ್ಲವೆಂದು ನಾಟಕವಾಡುತ್ತಿದ್ದಾಳೆ ಎಂದು ಕೈಯಿಂದ ಕಪಾಳಕ್ಕೆ ಹೊಡೆದಾಗ  ಹೊಡೆತಕ್ಕೆ ಬಿಂದುಳಿಗೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಳು ಎಂದು ಬಿಂದು ಆರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
  • ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ 323,504 ಐಪಿಸಿಯಂತೆ  ಪ್ರಕರಣ ದಾಖಲಾಗಿದೆ.

error: No Copying!