Spread the love
  • ಶಂಕರನಾರಾಯಣ: ದಿನಾಂಕ:15-06-2023(ಹಾಯ್ ಉಡುಪಿ ನ್ಯೂಸ್) ಹಾಲಾಡಿ ಮಾರ್ಕೆಟ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಬರೆಯುತ್ತಿದ್ದ ವ್ಯಕ್ತಿ ಯೋರ್ವನನ್ನು ಶಂಕರನಾರಾಯಣ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಭರತ್ ಕುಮಾರ್ ರವರು ಬಂಧಿಸಿದ್ದಾರೆ.
  • ಶಂಕರನಾರಾಯಣ ಪೊಲೀಸ್  ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಭರತ್ ಕುಮಾರ್ ವಿ ,ಅವರಿಗೆ ದಿನಾಂಕ: 13-06-2023 ರಂದು ಕುಂದಾಪುರ  ತಾಲೂಕಿನ 76 ಹಾಲಾಡಿ ಗ್ರಾಮದ ಹಾಲಾಡಿ ಮಾರ್ಕೇಟ್‌ ಬಳಿ ಸಾರ್ವಜನಿಕ   ಸ್ಥಳದಲ್ಲಿ ಅಕ್ರಮವಾಗಿ ಜನರನ್ನು ಸೇರಿಸಿ ಕೊಂಡು ಮಟ್ಕಾ ಜುಗಾರಿ ಆಟದ  ಬಗ್ಗೆ  ವ್ಯಕ್ತಿ ಯೋರ್ವರು ಹಣ ಸಂಗ್ರಹ ಮಾಡುತ್ತಿರುವುದಾಗಿ ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಕೂಡಲೇ ದಾಳಿ  ನಡೆಸಿ  ವಿಜಯ ಕುಮಾರ್ (43),  ವಾಸ:ಬೆಳಗೋಡು ಕೆದೂರು ಗ್ರಾಮ ಕುಂದಾಪುರ ಎಂಬಾತನನ್ನು ಬಂಧಿಸಿ ಆತನಿಂದ ಮಟ್ಕಾ ಸಂಖ್ಯೆ ಬರೆದ ಚೀಟಿ-1, ಬಾಲ್ ಪೆನ್ನು -1  ಹಾಗೂ ಮಟ್ಕಾ  ಜುಗಾರಿ ಆಟದ ಬಗ್ಗೆ ಸಂಗ್ರಹ ಮಾಡಿದ ನಗದು ಹಣ ರೂಪಾಯಿ 940/-ನ್ನು ವಶಪಡಿಸಿಕೊಂಡಿರುತ್ತಾರೆ.
  • ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಕಲಂ: 78(I),(III) ಕರ್ನಾಟಕ ಪೊಲೀಸ್‌ ಕಾಯ್ದೆ (ತಿದ್ದುಪಡಿ) 2021 ರಂತೆ ಪ್ರಕರಣ ದಾಖಲಾಗಿದೆ.
error: No Copying!