Spread the love

ಉಡುಪಿ: ದಿನಾಂಕ: 14-06-2023(ಹಾಯ್ ಉಡುಪಿ ನ್ಯೂಸ್) ನಗರದ ವಸತಿ ಸಂಕೀರ್ಣವೊಂದರ ಮಾಲೀಕರು ಗ್ರಾಹಕರೋರ್ವರಿಗೆ ಪ್ಲಾಟ್ ಅನ್ನು ಮಾರಾಟ ಮಾಡುವ ಬಗ್ಗೆ ಪೂರ್ತಿ ಹಣ ಪಡೆದು ಆನಂತರ ಪ್ಲಾಟನ್ನು ನೀಡದೆ ಅದೇ ಪ್ಲಾಟ್ ಗೆ ಬೇರೆಯವರ ಹೆಸರಲ್ಲಿ ಸಾಲ ಮಾಡಿ ಮಾರಾಟ ಮಾಡಿ ವಂಚಿಸಿದ್ದಾರೆ ಎಂದು ಲೆಸ್ಲಿ ಲಾರೆನ್ಸ್ ಡಿ ಆಲ್ಮೇಡಾ ಎಂಬವರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉಡುಪಿ ತಾಲೂಕಿನ ಮೂಡನಿಡಂಬೂರು ಗ್ರಾಮದ ಉಡುಪಿ ನಗರ ಸಭೆ ವ್ಯಾಪ್ತಿಯಲ್ಲಿರುವ ಕಾಡಬೆಟ್ಟು ಎಂಬಲ್ಲಿನ ಶ್ರೀ ಲಕ್ಷ್ಮಿ ಇನ್‌ಪ್ರಾಸ್ಟ್ರಕ್ಚರ್‌ ನ ಮಾಲೀಕರಾದ ಅಮೃತ್‌ ಶೆಣೈ ಎಂಬವರು ನಿರ್ಮಿಸಿರುವ ವೈಜರ್‌ ಹೆಸರಿನ ಕಟ್ಟಡದಲ್ಲಿ ಡುಪ್ಲೆಕ್ಸ್‌ ಫ್ಲಾಟ್‌ ನಂಬ್ರ 702 ನೇಯದನ್ನು ಲೆಸ್ಲಿ ಲಾರೆನ್ಸ್‌ ಡಿ ಅಲ್ಮೇಡಾ (63), ವಾಸ: ಫ್ಲ್ಯಾಟ್‌ ನಂಬ್ರ: 702, ವೈಜರ್‌ ಬಿಲ್ಡಿಂಗ್‌, ಚರ್ಚ್‌ ಹಿಂಬದಿ, ಉಡುಪಿ ಎಂಬವರ ಸಹೋದರ ಜರೋಮ್‌ ಪ್ರವೀಣ್‌ ಡಿ ಅಲ್ಮೇಡಾ ಮತ್ತು ಅವರ ಅತ್ತಿಗೆ ಜೆಸಿಂತಾ ಡಿ ಅಲ್ಮೇಡಾ ರವರಿಗೆ 2014 ರಲ್ಲಿ ಮಾರಾಟ ಕರಾರುಪತ್ರ ಮುಖೇನ ರೂಪಾಯಿ 61,54,400/- ಕ್ಕೆ ಮಾರಾಟ ಮಾಡುವುದಾಗಿ ಒಪ್ಪಿಗೆ ಪತ್ರ ಆಗಿದೆ ಎನ್ನಲಾಗಿದೆ.

ಲೆಸ್ಲಿ ಲಾರೆನ್ಸ್ ಡಿ ಆಲ್ಮೇಡಾರ ಸಹೋದರರಿಂದ ಕರಾರು ಪತ್ರದ ದಿನ ರೂಪಾಯಿ 1ಲಕ್ಷ ಮತ್ತು ನೆಫ್ಟ್‌ ಮುಖಾಂತರ ರೂಪಾಯಿ  9 ಲಕ್ಷ ಹಾಗೂ ಬಾಕಿ ಉಳಿದ ಹಣ ರೂಪಾಯಿ 51,54,400/- ವನ್ನು ದಿನಾಂಕ 01/04/2015 ರಿಂದ ದಿನಾಂಕ 29/10/2018 ರ ಮಧ್ಯಾವಧಿಯಲ್ಲಿ ಅಮ್ರತ್ ಶೆಣೈರಿಗೆ ಬ್ಯಾಂಕ್‌ ಮುಖಾಂತರ ಪಾವತಿಸಿದ್ದು, ಅಮ್ರತ್ ಶೆಣೈ ಒಟ್ಟು ರೂಪಾಯಿ 61,54,400/-ವನ್ನು ಪಾವತಿಸಿದ ನಂತರವೂ ಅದರ ಕಾಮಗಾರಿಯನ್ನು ಪೂರ್ಣಗೊಳಿಸದೇ, ಫ್ಲ್ಯಾಟ್‌ ಅನ್ನು ಅಮ್ರತ್ ಶೆಣೈ ಯು ಲೆಸ್ಲಿ ಲಾರೆನ್ಸ್ ಡಿ ಆಲ್ಮೇಡಾರ ಸಹೋದರನಿಗೆ ನೊಂದಣಿ ಮಾಡಿಸಿಕೊಡದೇ, ನೀಡಿದ ಫ್ಲ್ಯಾಟ್‌ ನ್ನು 2018 ರಲ್ಲಿ ಗುರುಪ್ರಸಾದ್‌ ಎಂಬುವವರಿಗೆ ಮಾರಾಟ ಮಾಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇದೇ ರೀತಿ ಅದೇ ಕಟ್ಟಡದಲ್ಲಿರುವ ಹಲವು ಫ್ಲ್ಯಾಟ್‌ ಗಳನ್ನು ಇತರರಿಗೆ ಮಾರಾಟ ಮಾಡುವುದಾಗಿ ನಂಬಿಸಿ, ಕರಾರು ಪತ್ರ ಮಾಡಿಸಿ, ಅವರಿಂದ ಹಣವನ್ನು ಪಡೆದು, ಅವರಿಗೂ ಸಹ ಫ್ಲ್ಯಾಟ್‌ ಗಳನ್ನು ನೀಡಿ, ಅದೇ ಫ್ಲ್ಯಾಟ್‌ ಗಳನ್ನು ಬೇರೆಯವರ ಹೆಸರಿನಲ್ಲಿ ಸಾಲ ಮಾಡಿಸಿ ಅವರಿಂದ ಹಣ ಪಡೆದು, ಲೆಸ್ಲಿ ಲಾರೆನ್ಸ್ ಡಿ ಆಲ್ಮೇಡಾರ ಸಹೋದರ ಹಾಗೂ ಇತರರಿಗೆ ನಂಬಿಸಿ, ಮೋಸ ಹಾಗೂ ವಂಚನೆ ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರಿದ್ದಾರೆ. ಅಮ್ರತ್ ಶೆಣೈ ಮಾಡಿದ ವಂಚನಾ ಮೊತ್ತವು ರೂಪಾಯಿ 12 ರಿಂದ 15 ಕೋಟಿ ಆಗಿರಬಹುದಾಗಿದೆ ಎಂದು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 406, 417, 418, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!