Spread the love

ಕುಂದಾಪುರ: ದಿನಾಂಕ: 10-06-2023(ಹಾಯ್ ಉಡುಪಿ ನ್ಯೂಸ್) ಕೋಟೇಶ್ವರ ಜಂಕ್ಷನ್ ಬಳಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಮೂವರು ಯುವಕರನ್ನು ಕುಂದಾಪುರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಪ್ರಸಾದ್ ಕುಮಾರ್.ಕೆ ಅವರು ಬಂಧಿಸಿದ್ದಾರೆ.

ಕುಂದಾಪುರ ಪೊಲೀಸ್‌ ಠಾಣೆ, ಪೊಲೀಸ್ ಉಪ ನಿರೀಕ್ಷಕರಾದ(ತನಿಖೆ) ಪ್ರಸಾದ್ ಕುಮಾರ್.ಕೆ ಅವರು ದಿನಾಂಕ:09-06-2023 ರಂದು ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಕೊಟೇಶ್ವರ  ಗ್ರಾಮದ ಕೊಟೇಶ್ವರ ಜಂಕ್ಷನ್ ಬಳಿ ಮೂವರು ಯುವಕರು ಗಾಂಜಾ ಸೇವನೆ  ಮಾಡುತ್ತಿದ್ದಾರೆ ಎಂದು  ಸಾರ್ವಜನಿಕರಿಂದ ಬಂದ ಮಾಹಿತಿಯ ಮೇರೆಗೆ ಕೂಡಲೇ ಸ್ಥಳಕ್ಕೆ ತೆರಳಿ ನೋಡಿದಾಗ ಅಲ್ಲಿ ತೂರಾಡಿಕೊಂಡು ಮೂರು ಜನರು ಅಮಲಿನಲ್ಲಿರುವುದು ಕಂಡುಬಂದಿದ್ದು,  ಮೂವರನ್ನು ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ 1) ಅಭಿಷೇಕ್‌ ಎಮ್‌ ಪಿ (20), 2) ವರ್ಗೀಸ್‌ ಜೋನ್‌ (22), 3) ಅಶ್ವಿನ್‌ ಮಣಿಕಂಠನ್‌ (21) ಎಂಬವರನ್ನು ಬಂಧಿಸಿ, ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ಬಗ್ಗೆ ಶ್ರೀ ಮಾತಾ  ಆಸ್ಪತ್ರೆ ಕುಂದಾಪುರದ  ವೈದ್ಯಾಧಿಕಾರಿಯವರ  ಮುಂದೆ ಹಾಜರುಪಡಿಸಿದ್ದು, ಮೂವರನ್ನು  ಪರೀಕ್ಷಿಸಿದ ವೈದ್ಯರು ಇವರು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ  ದಿನಾಂಕ  09/06/2023 ರಂದು ವರದಿ ನೀಡಿರುತ್ತಾರೆ ಎನ್ನಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಕಲಂ: 27(b)   NDPS Act ರಂತೆ ಪ್ರಕರಣ ದಾಖಲಾಗಿದೆ.

error: No Copying!