ಕುಂದಾಪುರ: ದಿನಾಂಕ:9-06-2023(ಹಾಯ್ ಉಡುಪಿ ನ್ಯೂಸ್) ಹೆಮ್ಮಾಡಿ ಜಂಕ್ಷನ್ ನಲ್ಲಿ ರಾಜ್ಯ ಗ್ರಹ ಮಂತ್ರಿ ಡಾ. ಜಿ.ಪರಮೇಶ್ವರರವರಿಗೆ ಶುಭಕೋರಿ ಹಾಕಲಾಗಿದ್ದ ಬ್ಯಾನರ್ ಅನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ತಾಲೂಕಿನ ಹೆಮ್ಮಾಡಿ ಜಂಕ್ಷನ್‌ನಲ್ಲಿ ಕರ್ನಾಟಕ ರಾಜ್ಯದ ಮಾನ್ಯ ಗೃಹ ಮಂತ್ರಿಯವರಾದ ಶ್ರೀ ಡಾ. ಜಿ ಪರಮೇಶ್ವರ ಅವರ ಭಾವಚಿತ್ರವಿರುವ ಬ್ಯಾನರನ್ನು ಯಾರೋ ಕಿಡಿಗೇಡಿಗಳು ದಿನಾಂಕ 06/06/2023 ರಂದು ಹರಿದು ಹಾಕಿರುವುದಾಗಿ ಕುಂದಾಪುರ ತಾಲೂಕು,ಬಾಳೆಕೆರೆ ನಿವಾಸಿ ಶರತ್ ಶೆಟ್ಟಿ ಯವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 427 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.