ಉಡುಪಿ: ದಿನಾಂಕ:08-06-2023(ಹಾಯ್ ಉಡುಪಿ ನ್ಯೂಸ್) ಉಡುಪಿ ನ್ಯಾಯಾಲಯದ ಆವರಣದಲ್ಲಿ ವ್ಯಕ್ತಿ ಯೋರ್ವರಿಗೆ ಕಾರಿನಲ್ಲಿ ಬಂದು ಇಬ್ಬರು ಅಡ್ಡಗಟ್ಟಿ ನಿಲ್ಲಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.
ಸತೀಶ ಶೇರಿಗಾರ್ ಎಂಬವರು ದಿನಾಂಕ 07/06/2023 ರಂದು ಮಧ್ಯಾಹ್ನ ಉಡುಪಿ ನ್ಯಾಯಾಲಯದ ಆವರಣದಲ್ಲಿರುವ ಕಾರ್ ಪಾರ್ಕಿಂಗ್ ನಲ್ಲಿ ತನ್ನ ಕಾರಿನಲ್ಲಿ ಹೊರಡುತ್ತಿರುವಾಗ, ಜಯ ಪೂಜಾರಿ ಮತ್ತು ಕುಶಾಲಾಕ್ಷಿ ಎಂಬವರು ಹಲ್ಲೆ ನಡೆಸುವ ಉದ್ದೇಶದಿಂದ ಕಾರು ನಂಬ್ರ KA20MB2191 ನೇದರಲ್ಲಿ ಬಂದು ಸತೀಶ್ ಶೇರಿಗಾರ್ ರ ಕಾರಿಗೆ ಅಡ್ಡಗಟ್ಟಿ, ಸತೀಶ್ ಶೇರಿಗಾರ್ ರನ್ನು ಕಾರಿನಿಂದ ಹೊರಗೆಳೆದು, ಸತೀಶ್ ಶೇರಿಗಾರ್ ರನ್ನು ಉದ್ದೇಶಿಸಿ, ಅವಾಚ್ಯ ಶಬ್ದಗಳಿಂದ ಬೈದು, ಇಬ್ಬರೂ ಆಪಾದಿತರು ಸತೀಶ್ ಶೇರಿಗಾರ್ ರಿಗೆ ಕೈಯಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಸತೀಶ್ ಶೇರಿಗಾರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 341, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.