ಬೈಂದೂರು: ದಿನಾಂಕ: 08-06-2023(ಹಾಯ್ ಉಡುಪಿ ನ್ಯೂಸ್) ರಾತ್ರಿ ಕುಡಿಯಲು ಬಿಯರ್ ಕೊಟ್ಟಿಲ್ಲ ಎಂದು ಜಿಲ್ಲಾ ಪಂಚಾಯತ್ ಸದಸ್ಯನೆಂದು ಕೊಂಡವ ಅಬಕಾರಿ ನಿರೀಕ್ಷಕರಿಗೆ ನಿಂದಿಸಿ, ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿದೆ.
ರಂಗನಾಥ ಎ (32) , ಅಬಕಾರಿ ನಿರೀಕ್ಷಕರು, ಕುಂದಾಪುರ ವಲಯ ಇವರು ಬೈಂದೂರು ವ್ಯಾಪ್ತಿಯಲ್ಲಿ ಅಬಕಾರಿ ನಿರೀಕ್ಷಕರಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 05/06/2023 ರಂದು ಕೆಲಸ ನಿರ್ವಹಿಸಿ ರಾತ್ರಿ ಮನೆಯಲ್ಲಿದ್ದಾಗ ಸುರೇಶ್ ಎಂಬಾತ ರಂಗನಾಥರವರ ವೈಯುಕ್ತಿಕ ದೂರವಾಣಿಗೆ ಕರೆ ಮಾಡಿ ತಾನು ಜಿಲ್ಲಾ ಪಂಚಾಯತ್ ಸದಸ್ಯನೆಂದು ಹೇಳಿಕೊಂಡು ಅಂಬಿಕಾ ಇಂಟರ್ ನ್ಯಾಷನಲ್ ಎಂಟರ್ ಪ್ರೈಸಸ್ ನಲ್ಲಿ ರಾತ್ರಿ ನನಗೆ ಸೇವನೆ ಮಾಡಲು ಬಿಯರ್ ಸಿಗುತ್ತಿಲ್ಲ ಎಂದು ಹೇಳಿ ಮೊಬೈಲ್ ನಲ್ಲಿ ಜೋರಾಗಿ ಮಾತನಾಡಿದಾಗ ರಂಗನಾಥ ರವರು ಇದು ನನಗೆ ಸಂಬಂಧಿಸಿದ ವ್ಯವಹಾರವಲ್ಲ ಏನೇ ಇದ್ದರೂ ಮಾರನೇ ದಿನ ಕಚೇರಿ ಸಮಯದಂದು ಲಿಖಿತವಾಗಿ ದೂರು ಸಮಸ್ಯೆಗಳನ್ನು ನೀಡುವಂತೆ ಸೌಜನ್ಯಯುತವಾಗಿ ಕರೆ ಮಾಡಿದ ಸುರೇಶ್ ಗೆ ತಿಳಿಸಿದರೂ ಕೂಡಾ ಆರೋಪಿ ಸುರೇಶ್ ಅವಾಚ್ಯ ಶಬ್ದಗಳಿಂದ ರಂಗನಾಥ ರನ್ನು ನಿಂದಿಸಿ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮಾರನೇ ದಿನ ದಿನಾಂಕ 06/06/2023 ರಂದು ರಂಗನಾಥ ರವರು ಬೈಂದೂರಿನಲ್ಲಿದ್ದಾಗ ತಾನು ಸುರೇಶನ ಸ್ನೇಹಿತನೆಂದು ಹೇಳಿ ವ್ಯಕ್ತಿಯೊಬ್ಬ ರಂಗನಾಥ ರವರ ದೂರವಾಣಿಗೆ ಕರೆ ಮಾಡಿ ರಾತ್ರಿ ನಾವು ಹೇಳಿದ ವಿಷಯಕ್ಕೆ ಯಾರ ಮೇಲೂ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಜೋರಾಗಿ ದಬಾಯಿಸಿ ರಾತ್ರಿ ಯಾವ ಸಮಯದಲ್ಲಿ ಕರೆ ಮಾಡಿದರೂ ಸ್ವೀಕರಿಸಿ ಮಾತನಾಡಬೇಕು ಎಂದು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿರುತ್ತಾರೆ ಎಂದು ರಂಗನಾಥ ರವರು ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.