ಮಲ್ಪೆ: ದಿನಾಂಕ:7-06-2023(ಹಾಯ್ ಉಡುಪಿ ನ್ಯೂಸ್) ಮಲ್ಪೆ ಪರಿಸರದಲ್ಲಿ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಶುಭ ಕೋರಿ ಹಾಕಲಾಗಿದ್ದ ಫ್ಲೆಕ್ಸ್ ಅನ್ನು ಯಾರೋ ಕಿಡಿಗೇಡಿಗಳು ಹಾನಿಗೊಳಿಸಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.
ಸುದರ್ಶನ ಸುವರ್ಣ ಎಂಬವರು ಗರಡಿ ರಸ್ತೆ ಕಿದಿಯೂರು ಗ್ರಾಮದ ನಿವಾಸಿಯಾಗಿದ್ದು ಇವರು ಮಲ್ಪೆಯಲ್ಲಿ ಸೈಬರ್ ಸೆಂಟರ್ ವ್ಯವಹಾರ ಮಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದಾರೆ ಎನ್ನಲಾಗಿದೆ.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಇವರಿಗೆ ಶುಭಕೋರಿ ಮಲ್ಪೆ ಪಡುಕೆರೆ ಸೇತುವೆಯ ಬಳಿ ಪಡುಕೆರೆ ಪರಿಸರದ ಕಾಂಗ್ರೆಸ್ ಕಾರ್ಯಕರ್ತರು ದಿನಾಂಕ 28/05/2023 ರಂದು ಪ್ಲೇಕ್ಸ್ ನ್ನು ಹಾಕಿದ್ದು, ದಿನಾಂಕ 04/06/2023 ಬೆಳಿಗ್ಗೆ ನೋಡಿದಾಗ ಯಾರೋ ಕಿಡಿಗೇಡಿಗಳು ಬ್ಯಾನರ್‌ನ್ನು ಹಾನಿಗೊಳಿಸಿರುತ್ತಾರೆ ಎಂದು ಸುದರ್ಶನ ಸುವರ್ಣರವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 427 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.