Spread the love

ಮಣಿಪಾಲ: ದಿನಾಂಕ: 7-06-2023 (ಹಾಯ್ ಉಡುಪಿ ನ್ಯೂಸ್ ) ಮಣಿಪಾಲದ ವಿದ್ಯಾರತ್ನ ರೆಸಿಡೆನ್ಸಿ ಯ ರೂಮ್ ಒಂದರಲ್ಲಿ ಗಾಂಜಾ ಸೇವನೆ ಮಾಡಿ ಗಲಾಟೆ ಮಾಡಿದ ಯುವತಿ ಯೋರ್ವಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ 04/06/2023 ರಂದು ಮಣಿಪಾಲ ಪೊಲೀಸ್‌ ಠಾಣೆಗೆ ವಿದ್ಯಾರತ್ನ ರೆಸಿಡೆನ್ಸಿಯ ರೂಮ್‌ ನಂಬ್ರ 301 ರಲ್ಲಿ ನಾಲ್ಕು ಜನ ಹುಡುಗಿಯರು ಗಲಾಟೆ ಮಾಡುತ್ತಿರುವುದಾಗಿ ಸಾರ್ವಜನಿಕ ರಿಂದ ಮಾಹಿತಿ ಬಂದಂತೆ ಮಣಿಪಾಲ ಪೊಲೀಸ್‌ ಠಾಣೆಯ ಪೊಲೀಸರು ಅಲ್ಲಿಗೆ ಹೋಗಿ ವಿಚಾರಿಸಿದಾಗ ಮೊನೀಶಾ ಕೃಷ್ಣ  (20) ಎಂಬವಳು ಮಾತನಾಡಲು ತೊದಲುತ್ತಿದ್ದು ಅವಳು ಮಾದಕವಸ್ತು ಗಾಂಜಾವನ್ನು ಸೇವನೆ ಮಾಡಿರುವ ಅನುಮಾನದ ಮೇರೆಗೆ  ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಅವಳನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಆರೋಪಿ ಮೊನೀಶಾ ಕೃಷ್ಣ  (20) ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 07/06/2023 ರಂದು ದೃಢಪತ್ರವನ್ನು ನೀಡಿರುತ್ತಾರೆ ಎನ್ನಲಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

error: No Copying!