- ಬೈಂದೂರು: ದಿನಾಂಕ 07-06-2023 (ಹಾಯ್ ಉಡುಪಿ ನ್ಯೂಸ್) ಬೈಂದೂರು ಠಾಣಾ ವ್ಯಾಪ್ತಿಯ ಹೇರೂರು ಹಾಗೂ ತಗ್ಗರ್ಸೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಸ್ಥಳಗಳಿಗೆ ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ ಗೌಡ ಬಿ ಎಸ್ ರವರು ದಾಳಿ ನಡೆಸಿ 9 ಜನರನ್ನು ಬಂಧಿಸಿದ್ದಾರೆ.
- ಬೈಂದೂರು ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ ಗೌಡ, ಬಿ ಎಸ್ (ಕಾ ಮತ್ತು ಸು) ಇವರಿಗೆ ಹೆರೂರು ಗ್ರಾಮದ ಆರ್ಶಿವಾದ ಬಾರ್ & ರೆಸ್ಟೊರೆಂಟ್ ಹಿಂದೆ ಹಾಡಿಯಲ್ಲಿ ಹಾಗೂ ತಗ್ಗರ್ಸೆ ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿಯ ಸರ್ಕಾರಿ ಗೇರು ಹಾಡಿಯಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಕೂಡಲೇ ಸಿಬ್ಬಂದಿಗಳೊಂದಿಗೆ ಹೆರೂರು ಗ್ರಾಮದ ಆಶೀರ್ವಾದ ಬಾರ್ & ರೆಸ್ಟೋರೆಂಟ್ ಹಿಂದೆ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದ ಸ್ಥಳಕ್ಕೆ ಹಾಗೂ ತಗ್ಗರ್ಸೆ ಗ್ರಾಮದ ಗುಡ್ಡೆ ಅಂಗಡಿ ಯ ಸರ್ಕಾರಿ ಗೇರು ಹಾಡಿಗೆ ದಾಳಿ ನಡೆಸಿ ಇಸ್ಪೀಟು ಜುಗಾರಿ ಆಟವಾಡುತ್ತಿದ್ದ ಬೋಜು ಶೆಟ್ಟಿ (52), ಬಾಳೆಜೆಡ್ಡು, ಹೊಸಂಗಡಿ ಗ್ರಾಮ ಕುಂದಾಪುರ ತಾಲೂಕು, ಬಸವ ದೇವಾಡಿಗ (52), ಕಣ್ಣುಕೆರೆ, ತೆಕ್ಕಟ್ಟೆ ಗ್ರಾಮ, ಕುಂದಾಪುರ , ಶೀನ (50) ಗುಡ್ಡೆ ಅಂಗಡಿ, ತಗ್ಗರ್ಸೆ ,ಜಯರಾಮ (48) ಮೈಕಳ , ತಗ್ಗರ್ಸೆ ಗ್ರಾಮ, ಮಂಜುನಾಥ ಪೂಜಾರಿ (52) ಗರಡಿ ಬಿಜೂರು ಬೈಂದೂರು, ಮಾಚ (64) ಗುಡ್ಡೆ ಅಂಗಡಿ ತಗ್ಗರ್ಸೆ, ಸಂದೇಶ (27) ಗುಡ್ಡೆ ಅಂಗಡಿ, ತಗ್ಗರ್ಸೆ, ರಂಗ (35) ಗುಡ್ಡೆ ಅಂಗಡಿ, ತಗ್ಗರ್ಸೆ, ಚಂದ್ರ ಪೂಜಾರಿ (42) ಬೈರಿಮನೆ, ತಗ್ಗರ್ಸೆ. ಇವರನ್ನು ವಶಕ್ಕೆ ಪಡೆದುಕೊಂಡು ಆಟಕ್ಕೆ ಬಳಸಿದ ಹಳೆಯ ನ್ಯೂಸ್ ಪೇಪರ್-2, ಇಸ್ಪಿಟ್ ಕಾರ್ಡ್-104, ಹಾಗೂ 4,800/- ರೂಪಾಯಿ ನಗದನ್ನು ಹಾಗೂ 3600 ರೂಪಾಯಿ ನಗದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
- ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿದೆ .