ಕಾರ್ಕಳ: ದಿನಾಂಕ:01-06-2023(ಹಾಯ್ ಉಡುಪಿ ನ್ಯೂಸ್) ಅಂಗನವಾಡಿ ಮೇಲ್ವಿಚಾರಕಿ ಹುದ್ದೆ ದೊರಕಿಸಿ ಕೊಡುವುದಾಗಿ ಮಹಿಳೆಯೋರ್ವರಿಗೆ ಬೆಂಗಳೂರಿನ ವೇಣುಗೋಪಾಲ ಎಂಬವರು ಮೂರು ಲಕ್ಷ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀಮತಿ ಶಶಿಕಲಾ (43) ಎಂಬವರು ಪೊರ್ಸಲ್ ಶಾಲೆ ಹತ್ತಿರ, ಸಚ್ಚರೀಪೇಟೆ , ಮುಂಡ್ಕೂರು ಗ್ರಾಮ, ಕಾರ್ಕಳ ತಾಲೂಕಿನ ನಿವಾಸಿಯಾಗಿದ್ದು ಇವರು ಅಂಗನವಾಡಿ ಕಾರ್ಯಕರ್ತೆ ಆಗಿ ಕೆಲಸ ಮಾಡಿಕೊಂಡಿದ್ದು,ಇವರಿಗೆ ಬೆಂಗಳೂರಿನಲ್ಲಿ ವೇಣು ಗೋಪಾಲ ಎಂಬವರು ಅಂಗನವಾಡಿಯ ಮೇಲ್ವಾಚಾರಕಿ ಹುದ್ದೆಗೆ ನೇಮಕಾತಿ ಮಾಡಿಸಿ ಕೊಡುವುದಾಗಿ ತಿಳಿಸಿ 2 ಲಕ್ಷ ಹಣವನ್ನು ಕೇಳಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅದರಂತೆ ಶ್ರೀಮತಿ ಶಶಿಕಲಾ ರವರು ಮುಂಡ್ಕೂರು ಗ್ರಾಮದ ಸಚ್ಚರೀಪೇಟೆ ಕೆನರಾ ಬ್ಯಾಂಕ್ ನ ತನ್ನ ಖಾತೆಯಿಂದ ಮೊದಲ ಬಾರಿಗೆ ದಿನಾಂಕ 16/11/2021 ರಂದು ರೂಪಾಯಿ 80,000/- ರನ್ನು ವೇಣು ಗೋಪಾಲನ ಅಣ್ಣ ವಿಶ್ವನಾಥ ಎಂಬವರ ಬ್ಯಾಂಕ್ ಖಾತೆಗೆ ಹಣ ಕಳುಹಿಸಿಕೊಟ್ಟಿದ್ದು, ನಂತರ ದಿನಾಂಕ 24/11/2021 ರಂದು ರೂಪಾಯಿ 1,00,000/- ಲಕ್ಷ, ದಿನಾಂಕ 25/11/2021 ರಂದು ರೂಪಾಯಿ 25,000 ದಿನಾಂಕ 02/12/2021 ರಂದು ರೂಪಾಯಿ 55,003/- ದಿನಾಂಕ 14/12/2021 ರಂದು ರೂಪಾಯಿ 10,000/- ದಿನಾಂಕ 20/12/2021 ರಂದು ರೂಪಾಯಿ 10,000/- ಹೀಗೇ ಒಟ್ಟು 2,80,003/- ನಗದನ್ನು 5 ಬಾರಿ ಹಣವನ್ನು ವೇಣು ಗೋಪಾಲನ ಬ್ಯಾಂಕ್ ಖಾತೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಪೊಲೀಸರಿಗೆ ದೂರಿದ್ದಾರೆ. ಅಲ್ಲದೇ ದಿನಾಂಕ 23/12/2021 ರಂದು ವೇಣು ಗೋಪಾಲನು ಶ್ರೀಮತಿ ಶಶಿಕಲಾ ಅವರ ಮನೆಗೆ ಬಂದು ರಸ್ತೆ ಅಪಘಾತವಾಗಿ ಗಾಯಗೊಂಡ ತನ್ನ ಮಗಳ ಚಿಕಿತ್ಸೆ ಬಗ್ಗೆ ಸಾಲ ರೂಪದಲ್ಲಿ ಹಣ ಕೇಳಿದ್ದು ಶ್ರೀಮತಿ ಶಶಿಕಲಾ ರವರು ರೂಪಾಯಿ 2,20,000/- ವನ್ನು ವೇಣಗೋಪಾಲನಿಗೆ ನೀಡಿದ್ದು, ಆತನು ಇದುವರೆಗೂ ವಾಪಾಸು ನೀಡದೇ ಹಣದ ಬಗ್ಗೆ ವಿಚಾರಿಸಿದ ಶ್ರೀಮತಿ ಶಶಿಕಲಾ ರವರ ಮೊಬೈಲ್ ನಂಬ್ರವನ್ನು ಇದೀಗ ಬ್ಲಾಕ್ ಮಾಡಿದ್ದು, ಶಶಿಕಲಾ ಅವರಿಗೆ ವಂಚನೆ ಮಾಡಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 415, 420, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.