- ಮಣಿಪಾಲ: ದಿನಾಂಕ :01-06-2023 (ಹಾಯ್ ಉಡುಪಿ ನ್ಯೂಸ್) ವಿದ್ಯಾರತ್ನ ನಗರದ ಸಾರ್ವಜನಿಕ ಸ್ಥಳದಲ್ಲಿ ರಾತ್ರಿ ಹೊತ್ತು ಗಾಂಜಾ ಸೇವನೆ ಮಾಡುತ್ತಿದ್ದ ಮೂವರು ಯುವಕರನ್ನು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನವೀನ್ ಎಸ್ ನಾಯ್ಕ ರವರು ಬಂಧಿಸಿದ್ದಾರೆ.
- ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ಎಸ್ ನಾಯ್ಕ ರವರು ದಿನಾಂಕ: 28-05-2023 ರಂದು ರಾತ್ರಿ ಸಿಬ್ಬಂದಿಗಳಾದ ಹೆಚ್ ಸಿ ಅಬ್ದುಲ್ ರಜಾಕ್ , ಹೆಚ್ ಸಿ ವಿಶ್ವಜೀತ್ ಮತ್ತು ಪಿಸಿ ಆನಂದಯ್ಯ ರವರೊಂದಿಗೆ ರಾತ್ರಿ ಗಸ್ತು ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ವಿದ್ಯಾರತ್ನ ರೆಸಿಡೆನ್ಸಿ ಮಣಿಪಾಲ ಬಳಿ ಸಾರ್ವಜನಿಕ ರಸ್ತೆಯಲ್ಲಿ ಗುವಾಹಟಿ ಮೂಲದ ರಿಶಿರಾಜ್ ಮೊಮಿನ್ (21) ಪ್ರಸ್ತುತ ವಿಳಾಸ: 304 ,ವಿದ್ಯಾರತ್ನ ರೆಸಿಡೆನ್ಸಿ , ಮಣಿಪಾಲ , ಇನ್ನೋರ್ವ ಅಮನ್ ಗೊಗೊಯ್ (21) ,ಅಸ್ಸಾಂ .ಪ್ರಸ್ತುತ ವಿಳಾಸ: 304, ವಿದ್ಯಾರತ್ನ ರೆಸಿಡೆನ್ಸಿ ಮಣಿಪಾಲ, ಮತ್ತೊಬ್ಬ ಅಮನ್ ಕುಮಾರ್ (21),ಪಾಟ್ನಾ, ಬಿಹಾರ .ಪ್ರಸ್ತುತ ವಿಳಾಸ: ವಿದ್ಯಾರತ್ನ ರೆಸಿಡೆನ್ಸಿ ಮಣಿಪಾಲ ಎಂಬುವವರನ್ನು ಮಾದಕವಸ್ತು ಗಾಂಜಾವನ್ನು ಸೇವನೆ ಮಾಡಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ಠಾಣೆಗೆ ಕರೆತಂದಿರುತ್ತಾರೆ ಎನ್ನಲಾಗಿದೆ.
- ಅದೇ ದಿನ ಈ ಮೂವರು ಯುವಕರು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಆರೋಪಿಗಳಾದ ರಿಶಿರಾಜ್ ಮೊಮಿನ್, ಅಮನ್ ಗೊಗೊಯ್, ಅಮನ್ ಕುಮಾರ್ ರವರು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 31/05/2023 ರಂದು ದೃಢಪತ್ರವನ್ನು ನೀಡಿರುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿದೆ.