Spread the love
  • ಉಡುಪಿ: ದಿನಾಂಕ:02-06-2023(ಹಾಯ್ ಉಡುಪಿ ನ್ಯೂಸ್) ಇನ್ ಸ್ಟ್ರಾಗ್ರಾಮ್ ನಲ್ಲಿ ಅಧಿಕ ಮೊತ್ತದ ಹಣದ ಆಮಿಷ ನೀಡಿ ವ್ಯಕ್ತಿ ಯೋರ್ವರಿಗೆ ನಾಲ್ಕು ಲಕ್ಷ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.
  • ದಿನಾಂಕ 23.04.2023 ರಂದು ಮಾನಸ್ ಎಂಬವರು ಇನ್ ಸ್ಟ್ರಾಗ್ರಾಮ್ ನಲ್ಲಿ Akshat Shrivastava  ( Instagram account – akshatt.w0rld ) ಎಂಬ ಹೆಸರಿನ ಫ್ರೋಫೈಲ್ ನಲ್ಲಿ Digital Ultra boost trading ಹೆಸರಿನಲ್ಲಿ ಹಣ ತೊಡಗಿಸಿದರೆ ಅಧಿಕ ಮೊತ್ತದ ಹಣ ಸಿಗುತ್ತದೆ ಎಂಬುದಾಗಿದ್ದ ಪೋಸ್ಟ್ ಅನ್ನು ನಂಬಿ ಮಾನಸ್ ರವರು ಇನ್ ಸ್ಟ್ರಾಗ್ರಾಮ್ ನಲ್ಲಿ ಆತನನ್ನು ಸಂಪರ್ಕಿಸಿದಾಗ ಆತನು Binance ಎಫ್ಲಿಕೇಶನ್ ನಲ್ಲಿ ಅಕೌಂಟ್ ತೆರೆಯುವಂತೆಯೂ ಮತ್ತು ಅಕೌಂಟ್ ವೆರಿಫಿಕೇಶನ್ ಆದ ಬಳಿಕ USDT-crypto ಖರೀಧಿಸಲು ಸೂಚಿಸಿರುತ್ತಾನೆ ಎಂದಿದ್ದಾರೆ.
  • ಮಾನಸ್ ರವರು ಆತನು ಹೇಳಿರುವುದನ್ನು ಸತ್ಯ ಎಂದು ನಂಬಿ, Binance ನಲ್ಲಿ ಐ.ಡಿ. 721171234 ರಂತೆ ಖಾತೆಯನ್ನು ತೆರೆದು ಅಪರಿಚಿತರಿಂದ ಹಣ ಪಾವತಿಸಿ  USDT-crypto ಖರೀಧಿಸಿ Binance ಎಪ್ಲಿಕೇಶನ್ ನಲ್ಲಿಟ್ಟಿರುತ್ತಾರೆ ಎಂದಿದ್ದಾರೆ. ಮಾನಸ್ ರವರು USDT-crypto ಖರೀದಿಸಲು ದಿನಾಂಕ 23.04.2023 ರಿಂದ ಈವರೆಗೆ ಒಟ್ಟು ರೂ. 3,56,303/- ಹಣವನ್ನು ಹೂಡಿಕೆ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ಅಕ್ಷತ್ ಶ್ರೀವಾಸ್ತವನು ಮಾನಸ್ ರ Binance ಗೆ ಲಿಂಕ್ ಕಳುಹಿಸಿ, Tron trc20  ಮುಖೇನ USDT-crypto ವರ್ಗಾಯಿಸಿಕೊಂಡಿರುತ್ತಾನೆ ಮತ್ತು ಈ ವರೆಗೂ ಯಾವುದೇ ಲಾಭಾಂಶದ ಹಣ ನೀಡದೇ ಮೋಸ ಮಾಡಿರುತ್ತಾನೆ ಎಂದು ಪೊಲೀಸರಿಗೆ ದೂರಿದ್ದಾರೆ.  
  • ಈ ಬಗ್ಗೆ ಉಡುಪಿ ಸೆನ್‌ ಪೊಲೀಸ್‌ ಠಾಣೆಯಲ್ಲಿ  ಕಲಂ: 66(D)   ಐ.ಟಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ.
error: No Copying!