Spread the love

ಉಡುಪಿ: 30-05-2023(ಹಾಯ್ ಉಡುಪಿ ನ್ಯೂಸ್) ಬಿಸಿಲಿನ ಬೇಗೆ ತಾಳಲಾರದೇ , ಕುಡಿಯುವ ನೀರಿಲ್ಲದೆ ನೊಂದಿದ್ದ ಜನರಿಗೆ ಇಂದು ಬೆಳಿಗ್ಗೆ ಯಿಂದ ವರುಣನ ಕ್ರಪೆಯಿಂದ ತಂಪಿನ ವಾತಾವರಣ ಸೃಷ್ಟಿಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಇಂದು ಮುಂಜಾನೆ ಯಿಂದ ದಟ್ಟ ಮೋಡ ಕವಿದ ವಾತಾವರಣವಿತ್ತು. ಅದರೊಂದಿಗೆ ಸಿಡಿಲು ಗುಡುಗಿನ ಆರ್ಭಟದೊಂದಿಗೆ ಇದೀಗ ಮುಂಗಾರು ಮಳೆ ಪ್ರಾರಂಭವಾಗಿದ್ದು ಕುಡಿಯುವ ನೀರಿಗಾಗಿ ಬಳಲುತ್ತಿದ್ದ, ಸೆಕೆಯಿಂದ ಹೈರಾಣಾಗಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಮುಂಗಾರು ಮಳೆಯು ಉತ್ತಮ ರೀತಿಯಲ್ಲಿ ಬೀಳಲಿ, ಯಾವುದೇ ಪ್ರಾಕೃತಿಕ ಹಾನಿಯನ್ನು ಮಾಡದೆ ಉತ್ತಮ ಕ್ರಷಿ ಚಟುವಟಿಕೆ ನಡೆಸಲು ಪೂರಕವಾಗಿ ಉತ್ತಮ ಮಳೆಯಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ.

error: No Copying!