- ಶಿರ್ವ: ದಿನಾಂಕ:30-05-2023(ಹಾಯ್ ಉಡುಪಿ ನ್ಯೂಸ್) ಪಡುಬೆಳ್ಳೆ,ಪಾಂಬೂರು ಬಸ್ಸು ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿ ಕೊಂಡು ಸಾರ್ವಜನಿಕ ಶಾಂತಿ ಭಂಗ ಮಾಡಿದ ನಾಲ್ವರು ಯುವಕರನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
- ಶಿರ್ವ ಪೊಲೀಸ್ ಠಾಣೆ ಪಿಎಸ್ಐ (ತನಿಖೆ) ಅನಿಲ್ ಕುಮಾರ್ ಟಿ ನಾಯ್ಕ್ ಅವರು ದಿನಾಂಕ 29.05.2023 ರಂದು ಇಲಾಖಾ ಜೀಪಿನಲ್ಲಿ ಜೀಪು ಚಾಲಕ ಎಪಿಸಿ ಖಾಲಿದ್ ನವಾಜ್, ಧರ್ಮಪ್ಪ ಕೆ ಎನ್, ಸಿಹೆಚ್‌ಸಿ ಇವರ ಜೊತೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಪಡುಬೆಳ್ಳೆ ಪಾಂಬೂರು ಬಸ್ಸು ನಿಲ್ದಾಣದ ಬಳಿ ಬೆಳಿಗ್ಗೆ 08:00 ಗಂಟೆ ಸುಮಾರಿಗೆ ತಲುಪುವಾಗ ಸಾರ್ವಜನಿಕ ರಸ್ತೆ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಾಲ್ಕು ಜನರು ಯುವಕರು ಒಬ್ಬರಿಗೊಬ್ಬರು ಬೈದಾಡುತ್ತಾ ಕೈಯಿಂದ ಹೊಡೆದಾಡುತ್ತಿದ್ದರು ಎನ್ನಲಾಗಿದೆ.ಇವರುಗಳು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿದ್ದರು ಎನ್ನಲಾಗಿದೆ .
- ಪಿಎಸ್ಐ ಯವರು ಆ ಕೂಡಲೇ ಜೀಪನ್ನು ನಿಲ್ಲಿಸುವಂತೆ ಜೀಪು ಚಾಲಕರಲ್ಲಿ ತಿಳಿಸಿ ನಂತರ ಧರ್ಮಪ್ಪ ಕೆ ಎನ್, ಸಿಹೆಚ್‌ಸಿ ಇವರ ಜೊತೆಯಲ್ಲಿ ಯುವಕರು ಹೊಡೆದಾಡಿ ಕೊಳ್ಳುತ್ತಿದ್ದ ಸ್ಥಳಕ್ಕೆ ಹೋಗಿ ವಿಚಾರಣೆ ನಡೆಸಿದಾಗ ಅವರುಗಳು ಹೆಣ್ಣು ಮಕ್ಕಳ ವಿಚಾರದಲ್ಲಿ ಗಲಾಟೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಅವರುಗಳು ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿದ ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ ಎನ್ನಲಾಗಿದೆ.
- 1) ಪ್ರಮೋದ್(22) ,ವಾಸ: ಪಡುಬೆಳ್ಳೆ ಹೌಸ್, ಪಾಂಬೂರು, ಬೆಳ್ಳೆ 2)ಸಂದೀಪ್(19) ,ವಾಸ: ಮಾನಸ ಬಳಿ ಪಾಂಬೂರು ,ಬೆಳ್ಳೆ . 3) ಚಂದ್ರಶೇಖರ್(24) ವಾಸ: ಮಾನಸ ಬಳಿ ಪಾಂಬೂರು , ಬೆಳ್ಳೆ ಗ್ರಾಮ, ಕಾಪು ಸಚಿನ್‌ಪೂಜಾರಿ(28) ವಾಸ:ಸ್ಮಿತಾ ನಿಲಯ, ಪಾಂಬೂರು ಪಡುಬೆಳ್ಳೆ ಬೆಳ್ಳೆ . ಈ ನಾಲ್ಕು ಜನರು ಸಾರ್ವಜನಿಕ ಸ್ಥಳದಲ್ಲಿ ಬೈದಾಡುತ್ತಾ ಕೈಯಿಂದ ಹೊಡೆದಾಡುತ್ತಾ ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗವುಂಟು ಮಾಡಿರುತ್ತಾರೆ ಎಂದು ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಕಲಂ 160 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿದೆ.