
ಬೈಂದೂರು: ದಿನಾಂಕ 29-05-2023(ಹಾಯ್ ಉಡುಪಿ ನ್ಯೂಸ್) ಶಿರೂರು ಗ್ರಾಮದ ಹಡವಿನ ಕೋಣೆ ಎಂಬಲ್ಲಿ ಮಟ್ಕಾ ಜುಗಾರಿ ನಿರತನಾಗಿದ್ದ ವ್ಯಕ್ತಿಯೋರ್ವನನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಬೈಂದೂರು ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ ಗೌಡ ಬಿ ಎಸ್ ಅವರಿಗೆ ದಿನಾಂಕ: 27-05-2023ರಂದು ಬೈಂದೂರು ತಾಲೂಕು ಶಿರೂರು ಗ್ರಾಮದ ಹಡವಿನಕೋಣೆ ಎಂಬಲ್ಲಿ ವ್ಯಕ್ತಿಯೊಬ್ಬರು ಮಟ್ಕಾ ಚೀಟಿ ಬರೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಖಚಿತ ಮಾಹಿತಿ ಬಂದ ಮೇರೆಗೆ ಮಾಹಿತಿ ಬಂದ ಸ್ಥಳಕ್ಕೆ ಇಲಾಖಾ ಜೀಪಿನಲ್ಲಿ ಸಿಬ್ಬಂದಿಗಳೊಂದಿಗೆ ಹೋಗಿ ಶಿರೂರು ಹಡವಿನಕೋಣೆ ರಸ್ತೆಯಲ್ಲಿ ಫಿಶ್ ಮಾರ್ಕೇಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಪಾಂಡುರಂಗ ಎಂಬವರು ಸಾರ್ವಜನಿಕರನ್ನು ಕರೆದು ಒಂದು ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಕೂಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ನಂಬ್ರ ಬರೆಯುವುದನ್ನು ದೂರದಿಂದಲೇ ನೋಡಿ ಖಚಿತಪಡಿಸಿಕೊಂಡು ದಾಳಿ ನಡೆಸಿ ಪಾಂಡುರಂಗ ರವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಿಸಿದಾಗ ಆಪಾದಿತ ಪಾಂಡುರಂಗ ಮೇಸ್ತ ರವರು ತಾನು ಸ್ವಂತ ಲಾಭಕ್ಕಾಗಿ ಮಟ್ಕಾ ಚೀಟಿ ಬರೆಯುತ್ತಿದ್ದುದಾಗಿ ತಿಳಿಸಿರುತ್ತಾನೆ ಮಟ್ಕಾ ಜುಗಾರಿ ಆಟದಿಂದ ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ಹಣ 1420/- ರೂ, ಮಟ್ಕಾ ಚೀಟಿ-1, ಬಾಲ್ ಪೆನ್ನು-1ನ್ನು ಸ್ವಾಧೀನ ಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ. 78 (i) (iii) KP ACT ನಂತೆ ಪ್ರಕರಣ ದಾಖಲಾಗಿದೆ.