ಮಣಿಪಾಲ: ದಿನಾಂಕ :16-05-2023(ಹಾಯ್ ಉಡುಪಿ ನ್ಯೂಸ್) ಮಣಿಪಾಲದ ಬಾರ್ ಒಂದಕ್ಕೆ ಡ್ರಿಂಕ್ಸ್ ಮಾಡಲು ಬಂದ 8 ಜನ ಯುವಕರ ತಂಡವು ಡ್ರಿಂಕ್ಸ್ ಮಾಡಿ ಫುಡ್ ತಿಂದು ಕೊನೆಗೆ ಬಿಲ್ ನೀಡದೆ ಬಾರ್ ನ ಬಿಲ್ ಆಪರೇಟರ್ ಹಾಗೂ ಸಿಬ್ಬಂದಿಗಳಿಗೆ ಹೊಡೆದು, ಬೆದರಿಕೆ ಹಾಕಿರುತ್ತಾರೆ ಎಂದು ಬಾರ್ ನ ಬಿಲ್ ಆಪರೇಟರ್ ಪೊಲೀಸರಿಗೆ ದೂರು ನೀಡಿದ್ದಾರೆ.
ದಿನಾಂಕ 14/05/2023 ರಂದು ರಾತ್ರಿ 07:30 ಗಂಟೆಗೆ ಮಣಿಪಾಲದ ಬೆಕಸಿನ್ ಬಾರ್ & ರೆಸ್ಟೋರೆಂಟ್‌ಗೆ ಆರೋಪಿಗಳಾದ ಶಾಹಿಮ್, ರಾಹುಲ್ ಮತ್ತು ಇತರ 6 ಜನ ಹುಡುಗರು ಬಂದಿದ್ದು ಪುಡ್ ಮತ್ತು ಡ್ರಿಂಕ್ಸ್ ಆರ್ಡರ್ ಮಾಡಿ ನಂತರ ಬಿಲ್ ಕೊಡುವುದಿಲ್ಲ ಎಂದು ಬ್ಯಾಕಸಿನ್‌ಬಾರ್ & ರೆಸ್ಟೋರೆಂಟ್, ಮಣಿಪಾಲದ ಬಿಲ್ ಆಪರೇಟರ್ ರಕ್ಷಿತ್ ಶೆಟ್ಟಿ (25) ಮತ್ತು ಅವರ ಸಿಬ್ಬಂದಿಯವರ ಬಳಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.
ರಕ್ಷಿತ್ ಶೆಟ್ಟಿಯು ಅವರಲ್ಲಿ ನೀವು ಬಿಲ್ಲನ್ನು ಕೊಡಬೇಕು ಎಂದು ಕೇಳಿದಾಗ ಆಪಾದಿತರೆಲ್ಲರು ರಕ್ಷಿತ್ ಶೆಟ್ಟಿ ಮತ್ತು ಸಿಬ್ಬಂದಿಗಳನ್ನು ಅಡ್ಡಗಟ್ಟಿ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಆಪಾದಿತರೆಲ್ಲರೂ ರಕ್ಷಿತ್ ಶೆಟ್ಟಿ ಮತ್ತು ಸಿಬ್ಬಂದಿಗಳನ್ನು ಉದ್ದೇಶಿಸಿ ಬೆದರಿಸಿ ಕೈಗಳಿಂದ ರಕ್ಷಿತ್ ಶೆಟ್ಟಿ ಮತ್ತು ಸಿಬ್ಬಂದಿಗಳಿಗೆ ಹೊಡೆದು, ಕಾಲಿನಿಂದ ತುಳಿದಿರುತ್ತಾರೆ. ಅಲ್ಲದೇ ಹೋಗುವಾಗ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಲ್ಲದೇ ದಿನಾಂಕ 15/05/2023 ರಂದು ಬೆಳಿಗ್ಗೆ 11:25 ಗಂಟೆಗೆ ರಕ್ಷಿತ್ ಶೆಟ್ಟಿ ಯವರ ಹೋಟೆಲ್‌ನ ಫೋನ್ ನಂಬರ್ ಗೆ ಒಂದು ಪೋನ್‌ಕರೆ ಬಂದಿದ್ದು ರಕ್ಷಿತ್ ರವರು ಸ್ವೀಕರಿಸಿದಾಗ ಅದರಲ್ಲಿ ಆಪಾದಿತ ಶಾಹಿಮ್ ಎಂಬವನು ನಾವು ನಿನ್ನೆ ಹೋಟೆಲ್‌ನಲ್ಲಿ ಗಲಾಟೆ ಮಾಡಿದವರು ನಿಮ್ಮ ಹೋಟೆಲ್‌ನವರನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ ಎಂದು ರಕ್ಷಿತ್ ಶೆಟ್ಟಿಯು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 143, 147, 341, 323, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.