ಉಡುಪಿ: ದಿನಾಂಕ:15-05-2023(ಹಾಯ್ ಉಡುಪಿ ನ್ಯೂಸ್) ಟೆಲಿಗ್ರಾಂ ಆಪ್ ನಲ್ಲಿ ಬಂದ ಸಂದೇಶವನ್ನು ನಂಬಿ ವ್ಯಕ್ತಿ ಯೋರ್ವರು 3ಲಕ್ಷ ರೂಪಾಯಿ ಗಳವರೆಗೆ ಹಣವನ್ನು ಕಳೆದುಕೊಂಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ದಿನಾಂಕ 12.05.2023 ರಂದು ಕಳತ್ತೂರು ಮುರುಳಿಧರ್ ರಾವ್ ಎಂಬವರು ಟೆಲಿಗ್ರಾಮ್ ಆಪ್ ನಲ್ಲಿ ಟಾಸ್ಕ್ ನಡೆಸಿ ಹೆಚ್ಚಿನ ಲಾಭ ಪಡೆಯುವ ಬಗ್ಗೆ ಬಂದಿರುವ ಸಂದೇಶವನ್ನು ಗಮನಿಸಿ, ಟೆಲಿಗ್ರಾಮ್ ಮುಖೇನ ಆ ವ್ಯಕ್ತಿಯನ್ನು ಮುರಳಿಧರ್ ರಾವ್ ಸಂಪರ್ಕಿಸಿದಾಗ ಟಾಸ್ಕ್ ನಡೆಸಲು ಹಣ ಪಾವತಿಸುವಂತೆ ಬ್ಯಾಂಕ್ ಖಾತೆಗಳನ್ನು ಆತ ನೀಡಿದ್ದು, ಇದನ್ನು ನಂಬಿದ ಕಳತ್ತೂರು ಮುರಳಿಧರ್ ರಾವ್ ಅವರು ದಿನಾಂಕ 12.05.2023 ರಿಂದ 14.05.2023 ರ ಮಧ್ಯೆ ಒಟ್ಟು ರೂ. 2,78,000/- ಹಣವನ್ನು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ NEFT ಮಾಡಿದ್ದಾರೆನ್ನಲಾಗಿದ್ದು , ಆ ನಂತರ ಟಾಸ್ಕ್ ನೀಡದೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಮುರಳಿಧರ್ ರಾವ್ ಸೆನ್ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಕಲಂ: 66(C), 66(D) ಐ.ಟಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ.