ಮಲ್ಪೆ: ದಿನಾಂಕ:11-05-2023 (ಹಾಯ್ ಉಡುಪಿ ನ್ಯೂಸ್) ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿಗೆ ಬೆದರಿಸಿ, ಹಲ್ಲೆ ಮಾಡಲು ಮುಂದಾದ ವ್ಯಕ್ತಿ ಯ ಮೇಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ವಿಧಾನಸಭಾ ಕ್ಷೇತ್ರದ ಸೆಕ್ಟರ್ -8 ಅಧಿಕಾರಿಯಾಗಿದ್ದ ಪಿಎಸ್ಐ ಸುಷ್ಮಾ ಭಂಡಾರಿ ಅವರು ದಿನಾಂಕ: 10-05-2023 ರಂದು ಚುನಾವಣಾ ಕರ್ತವ್ಯದಲ್ಲಿರುವಾಗ ಸೆಕ್ಟರ್ ನೂಡೆಲ್ ಆಫೀಸರ್ ಆದೇಶದಂತೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ Polling Booth No 107,108 ಗವರ್ನಮೆಂಟ್ ಮಾಡೆಲ್ ಹೈಯರ್ ಪ್ರೈಮರಿ ಶಾಲೆ ಬೆಳ್ಕಳೆ ಲಕ್ಷೀನಗರ ತೆಂಕನಿಡಿಯೂರು ಶಾಲೆಯ ಗೇಟ್ ಬಳಿ ಸ್ಥಳೀಯ ದೀಪಕ್ ಸಾಲಿಯಾನ್ ( 32) ಎಂಬ ವ್ಯಕ್ತಿ ಜನರನ್ನು ಸೇರಿಸಿಕೊಂಡು ಗುಂಪು ಮಾಡಿ ದೊಡ್ಡದಾಗಿ ಮಾತನಾಡುತ್ತಾ ನಿಂತಿರುವುದನ್ನು ಕಂಡು ಪಿಎಸ್ಐ ಸುಷ್ಮಾ ಭಂಡಾರಿ ಇವರು ಹೆಚ್‌ಜಿ, ನಾಗರಾಜ ಮತ್ತು ಕಾರಿನ ಚಾಲಕ ದಿನೇಶ ರವರು ಸ್ಥಳಕ್ಕೆ ಆಗಮಿಸಿ 144 ಸೆಕ್ಷನ್ ಜಾರಿಯಲ್ಲಿದ್ದು, ಅಲ್ಲಿಂದ ತೆರಳಲು ಗುಂಪು ಸೇರಿದ್ದವರಿಗೆ ಹೇಳಿದ್ದು ,ಆ ಸಮಯ ದೀಪಕ್ ಸಾಲಿಯಾನ್ ಏರುಧ್ವನಿಯಲ್ಲಿ ನಾವು ಇಲ್ಲಿಂದ ಹೋಗಲ್ಲ ನಮಗೆ ಹೇಳಲು ನೀನು ಯಾರು ,ಏನೂ ಬೇಕಾದರೂ ಮಾಡಿಕೋ ಎಂದು ಏಕ ವಚನದಲ್ಲಿ ಬೈದಿದ್ದು, ಅಲ್ಲದೆ ನನ್ನ ಏರಿಯಾಕ್ಕೆ ಬಂದು ನನಗೆ ಭೋದನೆ ಮಾಡುತ್ತೀಯಾ ಕಾಯ್ದೆ ಕಾನೂನು ನೀನು ಇಟ್ಟಿಕೊ ಎಂದು ಪಿಎಸ್ಐ ಅವರ ಮೇಲೆ ಕೈ ಮಾಡಲು ಬಂದಿದ್ದು,ಆ ಸಂದರ್ಭದಲ್ಲಿ ಜೊತೆಗಿದ್ದ ಹೆಚ್ ಜಿ ನಾಗರಾಜ ಇವರು ತಪ್ಪಿಸಿರುತ್ತಾರೆ ಎನ್ನಲಾಗಿದೆ. ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದು , ವಿಡಿಯೋ ಮಾಡುತ್ತಿದ್ದ ಮೊಬೈಲನ್ನು ಆಪಾದಿತರು ವಶಕ್ಕೆ ಪಡೆದಿರುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ದೀಪಕ್ ಸಾಲಿಯಾನ್ ವಿರುಧ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ 188, 353 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.