ಮಣಿಪಾಲ : ದಿನಾಂಕ: 10.05.2023 (ಹಾಯ್ ಉಡುಪಿ ನ್ಯೂಸ್) ಯುವಕನೋರ್ವನನ್ನು ಮೂವರು ಯುವಕರ ತಂಡ ವೊಂದು ದಿಗ್ಬಂಧನದಲ್ಲಿರಿಸಿ ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ.
ಉಡುಪಿ ಚಿಟ್ಪಾಡಿ ಪದ್ಮನಾಭ ನಗರ ನಿವಾಸಿ ಎಲೆನ್ ಪ್ರೀತ್ ಜತ್ತನ್ ಎಂಬವರನ್ನು ದಿನಾಂಕ:09-05-2023 ರಂದು ಆಪಾದಿತರಾದ ಸುಕೇಶ್, ಶರಣ್ ಮತ್ತು ನಿಧಿಶ್ ಎಂಬವರು ಮಣಿಪಾಲದ ಎಕ್ಸ್ ಟ್ರೇ ಕ್ಲಬ್ ಗೆ ಕರೆದುಕೊಂಡು ಹೋಗಿ ಬೆಳಿಗ್ಗೆ 10:30 ಗಂಟೆಯಿಂದ 12:30 ಗಂಟೆಯವರೆಗೆ ಅಕ್ರಮ ದಿಗ್ಬಂದನ ಮಾಡಿ ಕೈಯಿಂದ ಹಲ್ಲೆ ಮಾಡಿದ್ದು ಅಲ್ಲದೇ ಎಲೆನ್ ಪ್ರೀತ್ ಜತ್ತನ್ ರ ಮಿತ್ರರನಿಗೆ ಹೆಲ್ಮೇಟ್ ,ಕಲ್ಲುಗಳಿಂದ ಮುಖಕ್ಕೆ ದೇಹಕ್ಕೆ ಕಣ್ಣಿಗೆ ಹಲ್ಲೆ ಮಾಡಿರುತ್ತಾರೆ ಹಾಗೂ ಎಲೆನ್ ಪ್ರೀತ್ ಜತ್ತನ್ ರ ವಾಚ್ ಮತ್ತು ಮೊಬೈಲ್ ಜಖಂಗೊಳಿಸಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.