Spread the love
  • ಬ್ರಹ್ಮಾವರ: ದಿನಾಂಕ: 12-05-2023(ಹಾಯ್ ಉಡುಪಿ ನ್ಯೂಸ್) ಮದುವೆಯ ಸಮಯದಲ್ಲಿ ವರದಕ್ಷಿಣೆ ರೂಪದಲ್ಲಿ ಕೇಳಿದಷ್ಟು ಚಿನ್ನವನ್ನು ಕೊಡಲಿಲ್ಲ ಎಂಬ ಕಾರಣಕ್ಕೆ ಗಂಡ ಹಾಗೂ ಗಂಡನ ಮನೆಯವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿ,ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
  • ರಿಹಾನಾ ಬೇಗಂ ಎಂಬವರು ದಿನಾಂಕ: 02.04.2006 ರಂದು ಮೊಹಮ್ಮದ್ ಫಿರೋಜ್ ಎಂಬವರೊಂದಿಗೆ ಮದುವೆಯಾಗಿ ಗಂಡನ ಮನೆಯಾದ ಕುಮ್ರಗೋಡು ಆರ್‌ಎಫ್‌3 ಮೆನ್‌ಶನ್ ಎಂಬಲ್ಲಿ ವಾಸವಾಗಿದ್ದು, ಪ್ರಸ್ತುತ ಅವರಿಗೆ 4 ಜನ ಮಕ್ಕಳು ಇರುತ್ತಾರೆ ಎಂದಿದ್ದಾರೆ.  ರಿಹಾನಾ ಬೇಗಂ ರಿಗೆ ಮದುವೆಯಾದ ದಿನದಿಂದಲೂ ಮೊಹಮ್ಮದ್ ಫಿರೋಜ್ ಹಾಗೂ ಆತನ ತಾಯಿ ಕುಲ್ಸುಂಬಿ ಮತ್ತು ಅಕ್ಕಂದಿರಾದ ಶಂಶಾದ್ ಮತ್ತು ಝಾಹಿದಾ ಹಾಗೂ ತಮ್ಮಂದಿರಾದ ಸಲೀಂ & ಸಮೀರ್ ಎಂಬವರು ಸೇರಿ ರಿಹಾನಾ ಬೇಗಂ ರನ್ನು ಉದ್ದೇಶಿಸಿ ಅವಾಚ್ಯ ಶಬ್ಶಗಳಿಂದ ಬೈದು ರಿಹಾನಾ ಬೇಗಂರ ತಂದೆ ತಾಯಿಯವರನ್ನು ಕೀಳಾಗಿ ನೋಡುತ್ತಿದ್ದರು ಎಂದು ದೂರಿದ್ದಾರೆ.
  • ರಿಹಾನಾ ಬೇಗಂ ರನ್ನು ಮದುವೆಯಾಗುವ ಸಮಯ ಗಂಡನ ಮನೆಯವರು 100 ಪವನ್ ಚಿನ್ನ ಕೇಳಿದ್ದು, ಆದರೆ ರಿಹಾನಾ ಬೇಗಂರ ತಂದೆ ತಾಯಿಯವರು 85 ಪವನ್ ಚಿನ್ನ ಹಾಕಿ ಮದುವೆ ಮಾಡಿಕೊಟ್ಟಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ., ಇದೇ ವಿಚಾರದಲ್ಲಿ ಆರೋಪಿಗಳು ಅಸಮಾಧಾನಗೊಂಡು ರಿಹಾನಾ ಬೇಗಂರಿಗೆ ಯಾವಾಗಲೂ ಅವಾಚ್ಯವಾಗಿ ಬೈದು ಮಾನಸಿಕ ಹಿಂಸೆ ನೀಡುತ್ತಿದ್ದುದಲ್ಲದೇ, ಗಂಡನಾದ ಮೊಹಮ್ಮದ್ ಫಿರೋಜ್ ಯಾವಾಗಲೂ ಕೆಟ್ಟದಾಗಿ ಬೈದು, ಕೈಯಿಂದ ಹೊಡೆದು ಚಿತ್ರಹಿಂಸೆ ನೀಡುತ್ತಿದ್ದರು ಎಂದು ದೂರಿದ್ದಾರೆ.
  • ರಿಹಾನಾ ಬೇಗಂ ಅವರು ತಾಯಿ ಮನೆಯಾದ ಗಂಗೊಳ್ಳಿಗೆ ಮತದಾನ ಮಾಡಲು ಹೋಗಿ ದಿನಾಂಕ: 11.05.2023 ರಂದು ಮಧ್ಯಾಹ್ನ 2.00 ಗಂಟೆಗೆ ವಾಪಾಸ್ಸು ಗಂಡನ ಮನೆಗೆ ಬಂದಾಗ ಗಂಡನಾದ ಮೊಹಮ್ಮದ್ ಫಿರೋಜ್ ಮನೆಯಲ್ಲಿ ಇಲ್ಲದೇ ಇದ್ದು, ಸಂತೆಕಟ್ಟೆಯಲ್ಲಿರುವ ಸಂಗಮ್ ಎಂಬ ಹೆಸರಿನ ಅವರ ರೆಸ್ಟೊರೆಂಟ್ ನಲ್ಲಿ ಇದ್ದು, ಅಲ್ಲಿಂದಲೇ  ಫೋನ್ ಮಾಡಿ ರಿಹಾನಾ ಬೇಗಂರಿಗೆ ಅಡುಗೆ ತಯಾರಿಸಲು ಹೇಳಿದ್ದು, ಅದಕ್ಕೆ ರಿಹಾನಾ ಬೇಗಂರು ರೆಸ್ಟೋರೆಂಟ್ ನಿಂದಲೆ ಅಡುಗೆ ತರಲು ಹೇಳಿದ್ದಕ್ಕೆ ಮೊಹಮ್ಮದ್ ಫಿರೋಜ್ ಸಿಟ್ಟಾಗಿ ಕೆಟ್ಟದಾಗಿ ಬೈದಿದ್ದು ಇದರಿಂದ ರಿಹಾನಾ ಬೇಗಂರು ಭಯಗೊಂಡು ಏನಾಗುತ್ತದೆಯೋ ಎಂದು ಹೆದರಿ ಕುಮ್ರಗೋಡು ಮಸೀದಿ ಬಳಿ ಬಂದಾಗ ಮೊಹಮ್ಮದ್ ಫಿರೋಜ್ ಅಲ್ಲಿಗೆ ಬಂದು ರಿಹಾನಾ ಬೇಗಂರನ್ನು ಉದ್ದೇಶಿಸಿ ಅವಾಚ್ಯ ಶಬ್ಧಗಳಿಂದ ಬೈದು ಬಲಕಣ್ಣಿನ ಬಳಿ ಬಲವಾಗಿ ಹೊಡೆದು ದೂಡಿದ ಪರಿಣಾಮ ರಿಹಾನಾ ಬೇಗಂರು ಕೆಳಗೆ ಬಿದ್ದು, ಅವರ ಬಲ ಕಣ್ಣಿಗೆ ಹಾಗೂ ಹಣೆಯ ಬಲಭಾಗಕ್ಕೆ ಮತ್ತು ಬಲಭುಜದ ಒಳಗೆ ಗುದ್ದಿದ ನೋವಾಗಿರುತ್ತದೆ ಎಂದೂ ಮೊಹಮ್ಮದ್ ಫಿರೋಜ್ ನು ರಿಹಾನಾ ಬೇಗಂ ರಿಗೆ ಹೊಡೆದ ವಿಚಾರ ಯಾರಿಗಾದರೂ ತಿಳಿಸಿದರೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ರಿಹಾನಾ ಬೇಗಂ ಪೊಲೀಸರಿಗೆ ದೂರಿದ್ದಾರೆ . ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಕಲಂ 498A, 323, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
error: No Copying!