ಬೆಂಗಳೂರು: ದಿನಾಂಕ:7-05-2023( ಹಾಯ್ ಉಡುಪಿ ನ್ಯೂಸ್) ಮತದಾರರನ್ನು ಬಿಜೆಪಿಯತ್ತ ಸೆಳೆಯುವ ಗುರಿಯಿಂದ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ನಗರದ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಭಾನುವಾರ ಬ್ರಹತ್ ರೋಡ್ ಶೋ ನಡೆಸಿದ್ದಾರೆ.
ಭಾನುವಾರ ಬೆಳಿಗ್ಗೆ ರಾಜಭವನದಿಂದ ಹೊರಟು ನ್ಯೂ ತಿಪ್ಪಸಂದ್ರಕ್ಕೆ ಬಂದ ಅವರು, ಅಲ್ಲಿ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನ್ಯೂ ತಿಪ್ಪಸಂದ್ರದಿಂದ ತೆರೆದ ವಾಹನದಲ್ಲಿ ನಿಂತು ರೋಡ್ ಶೋ ಆರಂಭಿಸಿದ್ದಾರೆ.
ಮಹದೇವಪುರ,ಕೆ.ಆರ್.ಪುರ, ಸಿ.ವಿ.ರಾಮನ್ ನಗರ, ಸರ್ವಜ್ಞ ನಗರ, ಶಿವಾಜಿ ನಗರ, ಮತ್ತು ಶಾಂತಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನಿ ಸಂಚರಿಸಲಿದ್ದಾರೆ.