Spread the love

ಶಿರ್ವ : ದಿನಾಂಕ: 06-05-2023(ಹಾಯ್ ಉಡುಪಿ ನ್ಯೂಸ್) ಕುರ್ಕಾಲು ಗ್ರಾಮದ ಕುಂಜಾರು ಗಿರಿಯಲ್ಲಿ ದರೋಡೆ ನಡೆಸಲು ಹೊಂಚು ಹಾಕುತ್ತಿದ್ದ ಆರು ಜನ ಯುವಕರನ್ನು ಶಿರ್ವ ಠಾಣಾ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಶಿರ್ವ ಪೊಲೀಸ್‌ ಠಾಣೆ , ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ.ಸಿ ಅವರಿಗೆ ದಿನಾಂಕ :05-05-2023ರಂದು ರಾತ್ರಿ ಬಂದ ಖಚಿತ ಮಾಹಿತಿ ಯಂತೆ ಕಾಪು ತಾಲೂಕು ಕುರ್ಕಾಲು ಗ್ರಾಮದ ಕುಂಜಾರುಗಿರಿ ದೇವಸ್ಥಾನದ  ದ್ವಾರದ  ಬಳಿ ದರೋಡೆ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದ ವ್ಯಕ್ತಿಗಳನ್ನು ಠಾಣಾ ಸಿಬ್ಬಂದಿಯವರೊಂದಿಗೆ ಕೂಡಲೇ ಸ್ಥಳಕ್ಕೆ ತೆರಳಿ ದಾಳಿ ನಡೆಸಿ ಆಪಾದಿತರಾದ 1) ಇಕ್ಬಾಲ್‌ @ಇಕ್ಬಾಲ್‌ ಶೇಖ್‌ ಯಾನೆ ಇಕ್ಬಾಲ್‌ ಅಹಮ್ಮದ್‌(32),,ವಾಸ: ಶಾರದ ನಗರ, 1 ಕ್ರಾಸ್‌ ಮಂಚಿಕೆರೆ ಬಾಡಿಗೆ  ಮನೆ, ಮಂಚಿ ಗ್ರಾಮ,ಉಡುಪಿ ತಾಲೂಕು. 2) ಪರ್ವೇಜ್‌ (24)  ವಾಸ: ಕಿನ್ನಿಮೂಲ್ಕಿ ವಿಆರ್‌ಎಲ್‌ ರಾಮಚಂದ್ರ ಲೇಔಟ್‌  ಕಿನ್ನಿಮೂಲ್ಕಿ  ಉಡುಪಿ ತಾಲೂಕು. 3)  ಅಬ್ದುಲ್‌ ರಾಕೀಬ್‌(20) ವಾಸ: ಹೂಡೆ ಸಾಲಿಯತ್‌ ಶಾಲೆಯ  ಹತ್ತಿರ  ಪಡುತೋನ್ಸೆ ಗ್ರಾಮ ಉಡುಪಿ ತಾಲೂಕು. 4) ಮೊಹಮ್ಮದ್‌  ಸಕ್ಲೇನ್‌(23) , ವಾಸ: ಶೇಖ್‌  ದಾವೂದ್‌ ಮಂಜಿಲ್‌, ಉರ್ದು  ಶಾಲೆಯ ಹಿಂಬದಿ. ಹೂಡೆ  ಪಡುತೋನ್ಸೆ ಗ್ರಾಮ ಉಡುಪಿ ತಾಲೂಕು 5) ಸಲೇಮ್‌ @ ಸಲೀಂ (19) ವಾಸ: 7  ಕ್ರಾಸು  ನೇಜಾರು ಕೆಳರ್ಕಾಳಬೆಟ್ಟು  ಗ್ರಾಮ, ಉಡುಪಿ ತಾಲೂಕು 6) ಅನಾಸ್‌ (19) , ವಾಸ: 1 ನೇ ಮಹಡಿ, ಗ್ರೀನ್‌ ಪ್ಲಾಟ್‌, ಕ್ಲಾಸಿಕ್‌ ಛಾಯಾ ಲೇಔಟ್‌, ಸಂತೆಕಟ್ಟೆ, ಉಡುಪಿ ತಾಲೂಕು ಇವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡು ಅವರುಗಳ ವಶದಲ್ಲಿದ್ದ ಡ್ರಾಗನ್‌ -1, ಮೆಣಸಿನ ಹುಡಿ ಪ್ಯಾಕೆಟ್‌ -2, ಮರದ ವಿಕೆಟ್‌ – 3, KA20EQ 3582ನೇ ನೊಂದಣಿ ಸಂಖ್ಯೆಯ  ದ್ವಿ  ಚಕ್ರವಾಹನ, KA20HA 6340ನೇ ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನ, YAMAHA ಕಂಪೆನಿ ತಯಾರಿಕೆಯ FZ ಮಾದರಿಯ ಕಪ್ಪುಬಣ್ಣದ ಚಾಸಿಸ್‌ ನಂಬ್ರ ME121COM262002263  ಎಂದು ನಮೂದು ಮೋಟಾರ್‌ ಸೈಕಲ್ ಹಾಗೂ ನಾಲ್ಕು  ಮೊಬೈಲ್ ಫೋನ್ ಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ, ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ರೂ.2,31,000/- ಆಗಬಹುದು. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆಯಲ್ಲಿ ಕಲಂ 399, 402   ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!