ಶಂಕರನಾರಾಯಣ : ದಿನಾಂಕ: 6-05-2023 (ಹಾಯ್ ಉಡುಪಿ ನ್ಯೂಸ್) ಬೆಳ್ವೆ ಗ್ರಾಮದಲ್ಲಿ ನೆರೆಮನೆಯ ದನದ ಕರು ಗೇರುಗಿಡ ತಿಂದಿತೆಂಬ ಕಾರಣಕ್ಕೆ ನೆರೆಮನೆಯವರಿಗೆ ಹಲ್ಲೆ ನಡೆಸಿ,ಜೀವ ಬೆದರಿಕೆ ಹಾಕಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೀರ್ತಿರಾಜ್ ಶೆಟ್ಟಿ ( 27 ವರ್ಷ) ಎಂಬುವರು ಸುರ್ಗೊಳ್ಳಿ ಮೇಲ್ಮನೆ , ಬೆಳ್ವೆ ಗ್ರಾಮ ಹೆಬ್ರಿ ತಾಲೂಕು ಎಂಬಲ್ಲಿ ವಾಸವಾಗಿದ್ದು , ಇವರು ದಿನಾಂಕ 04.05.2023 ರಂದು ರಾತ್ರಿ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಸುರ್ಗೊಳ್ಳಿ ಮೇಲ್ಮನೆ ಎಂಬಲ್ಲಿ ಬಾವಿಯ ಪಂಪಸೆಟ್ ಸ್ವಿಚ್ ಆನ್ ಮಾಡಲು ಹೋದಾಗ ಆರೋಪಿ ಮೋಹನ ಶೆಟ್ಟಿ ಎಂಬಾತನು ಆತನ ಮನೆಯ ಗೇರು ಗಿಡವನ್ನು ಕೀರ್ತಿರಾಜ್ ಶೆಟ್ಟಿ ಯವರ ಮನೆಯ ದನದ ಕರು ತಿಂದಿದೆ ಎಂದು ಹೇಳಿ ಗಲಾಟೆ ಮಾಡಿದ್ದು, ಈ ಸಮಯ ಆರೋಪಿ ಸಂಧೀಪ್ ಶೆಟ್ಟಿ ಎಂಬವನು ಓಡಿ ಬಂದು ಕೀರ್ತಿರಾಜ್ ಶೆಟ್ಟಿ ಯವರೊಂದಿಗೆ ಗಲಾಟೆ ಮಾಡಿ ಅವರನ್ನು ಅಡ್ಡಗಟ್ಟಿ ಕೈಯಿಂದ ಕಪಾಲಕ್ಕೆ ಹೊಡೆದಿರುತ್ತಾನೆ ಎಂದಿದ್ದಾರೆ.
ಈ ಸಮಯ ಮೋಹನ ಶೆಟ್ಟಿಯು ಕೀರ್ತಿರಾಜ್ ಶೆಟ್ಟಿ ಯವರ ಕೈಯಲ್ಲಿ ಇದ್ದ ಕಬಿಣ್ಣದ ಬ್ಯಾಟರಿ ಕಸಿದುಕೊಂಡು ಸಂಧೀಪ್ ನಿಗೆ ನೀಡಿ ಅವನನ್ನು ಕೊಂದು ಹಾಕು ಎಂದು ಹೇಳಿದಾಗ ಸಂಧೀಪನು ಕೀರ್ತಿರಾಜ್ ರ ತಲೆಗೆ ಬ್ಯಾಟರಿಯಿಂದ ಹೊಡೆದು ಗಾಯವನ್ನುಂಟು ಮಾಡಿರುತ್ತಾನೆ, ಈ ಸಮಯ ಕೀರ್ತಿರಾಜ್ ರವರು ಅವರಿಂದ ತಪ್ಪಿಸಿಕೊಂಡು ಮನೆಗೆ ಓಡಿ ಹೋದಾಗ ಅಲ್ಲಿಗೆ ಬಂದ ಆರೋಪಿಗಳು ಕೀರ್ತಿರಾಜ್ ರ ಮನೆಯ ಅಂಗಳಕ್ಕೆ ಕೈಯಲ್ಲಿ ಕತ್ತಿ ಹಿಡಿದುಕೊಂಡು ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಕೀರ್ತಿರಾಜ್ ಶೆಟ್ಟಿ ಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ:,341, 323, 324 504, 506 (2),447 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.