Spread the love
  • ಬೈಂದೂರು: ದಿನಾಂಕ :29-04-2023(ಹಾಯ್ ಉಡುಪಿ ನ್ಯೂಸ್) ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಗುರುರಾಜ್ ಗಂಟಿಹೊಳೆಯವರು ಹಾಗೂ ಶ್ರೀ ಜಟ್ಟಿಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟವರ ಮೇಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  •   ಬೈಂದೂರು ವಿಧಾನಸಭಾ ಕ್ಷೇತ್ರದ ಕಂಬದಕೋಣೆ  ಜಟ್ಟಿಗೇಶ್ವರ  ದೇವಸ್ಥಾನದ ಆವರಣದಲ್ಲಿ  ಚುನಾವಣಾ  ನೀತಿ ಸಂಹಿತೆ  ಉಲ್ಲಂಘಿಸಿ  ಚುನಾವಣಾ ಪ್ರಚಾರ  ನಡೆಸುತ್ತಿದ್ದ  ಬಗ್ಗೆ ವಿಶ್ವನಾಥ,.ಎಸ್, 118-ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಎಫ್.ಎಸ್.ಟಿ-1 ಅಧಿಕಾರಿ ಯವರಿಗೆ ಮಾಹಿತಿ ದೊರೆತ ಪ್ರಕಾರ ಎಫ್.ಎಸ್.ಟಿ -1 ಟೀಂ ಜೊತೆಯಲ್ಲಿ ದಿನಾಂಕ 28/04/2023  ರಂದು  ಮಧ್ಯಾಹ್ಮ 12:10 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಬದಕೋಣೆ ಜಟ್ಟಿಗೇಶ್ವರ ದೇವಸ್ಥಾನದಲ್ಲಿ 70 ರಿಂದ 100 ಕುರ್ಚಿಗಳನ್ನು ಹಾಕಲಾಗಿದ್ದು.  80 ಜನ ಮಹಿಳೆಯರು ಹಾಗೂ  20 ಜನ ಪುರುಷರು ಆಸೀನರಾಗಿದ್ದು ,ಕೆಲವು ಪುರುಷರು ಅಂಗಿಗಳ ಮೇಲೆ ಕಮಲ ಚಿಹ್ನೆಯ ಗುರುತು ಇರುವ ಬ್ಯಾಡ್ಜ್ ಹಾಕಿಕೊಂಡಿದ್ದು, ಕೆಲವರು ಕಮಲದ ಚಿಹ್ನೆಯ ಗುರುತು ಇರುವ ಶಾಲು ಹಾಕಿಕೊಂಡಿರುತ್ತಾರೆ ಎನ್ನಲಾಗಿದೆ. ಆ ಬಳಿಕ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಜೆಪಿ ಪಕ್ಷದ ಅಭ್ಯರ್ಥಿ ಗುರುರಾಜ ಶೆಟ್ಟಿ ಗಂಟಿಹೊಳೆ ಇವರು ದೇವಸ್ಥಾನದ ಆವರಣದ ಪಕ್ಕಕ್ಕೆ ಬಂದು ಮತ್ತೆ ಗುಂಪು ಸೇರಿಸಿಕೊಂಡು ಚುನಾವಣಾ ಪ್ರಚಾರ ಮಾಡಿರುತ್ತಾರೆ  . ಶ್ರೀ ಜಟ್ಟಿಗೇಶ್ವರ ದೇವಸ್ಥಾನ ಕಂಬದಕೋಣೆ ಇದರ ಆವರಣದಲ್ಲಿ ಚುನಾವಣಾ ನಿಯಮಾನುಸಾರ ಚುನಾವಣಾಧಿಕಾರಿಯಿಂದ ಯಾವುದೇ ಅನುಮತಿ ಪಡೆಯದೇ ಚುನಾವಣಾ ಪ್ರಚಾರ ಮಾಡುವ ಮೂಲಕ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಗುರುರಾಜ ಶೆಟ್ಟಿ ಗಂಟಿಹೊಳೆ ಹಾಗೂ ಪದಾಧಿಕಾರಿಗಳು ಮತ್ತು ಶ್ರೀ ಜಟ್ಟಿಗೇಶ್ವರ ದೇವಸ್ಥಾನಕ್ಕೆ ಸಂಬಂಧ ಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕಾಗಿ ಚುನಾವಣಾಧಿಕಾರಿಗಳು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕಲಂ:  7 RELIGIOUS  INSTITUTIONS (PREVENTION OF MISUSE ACT 1988) ರಂತೆ ಪ್ರಕರಣ ದಾಖಲಾಗಿದೆ.  
     
error: No Copying!