Spread the love

ಉಡುಪಿ: ದಿನಾಂಕ 28-04-2023(ಹಾಯ್ ಉಡುಪಿ ನ್ಯೂಸ್)ನಗರದ ಕನಕದಾಸ ರಸ್ತೆಯ ಜ್ಯುವೆಲ್ಲರಿ ಅಂಗಡಿ ಯೊಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಗಂಡಸರು ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ದೂರಲಾಗಿದೆ.

ಎಸ್‌. ಕಿಶೋರ್‌ ಆಚಾರ್ಯ ಎಂಬವರು ಉಡುಪಿ ಕನಕದಾಸ ರಸ್ತೆಯಲ್ಲಿರುವ ಹರ್ಷಿತಾ ಜುವೆಲ್ಲರಿ ಶಾಪ್‌ ನ ಮಾಲಕರಾಗಿದ್ದು, ಅವರ ಮಗ ಮತ್ತು ಹೆಂಡತಿ ಜ್ಯುವೆಲ್ಲರಿ ಅಂಗಡಿಯನ್ನು ನಡೆಸಿಕೊಂಡಿದ್ದು, ದಿನಾಂಕ 27/04/2023 ರಂದು ಮಧ್ಯಾಹ್ನ ಸಮಯದಲ್ಲಿ ಅಂದಾಜು 40 ವರ್ಷ ಪ್ರಾಯದ ಇಬ್ಬರು ಅಪರಿಚಿತ ಗಂಡಸರು ಜ್ಯುವೆಲ್ಲರಿ ಅಂಗಡಿಗೆ ಬಂದು ಮೂಗುತಿ ಬಗ್ಗೆ ಕೇಳಿದ್ದು, ಎಸ್.ಕಿಶೋರ್ ಆಚಾರ್ಯ ಅವರ ಹೆಂಡತಿ ಚಿನ್ನದ ಮೂಗುತಿ ಇರುವ ಪ್ಯಾಕೇಟ್‌ ಗಳನ್ನು ಅವರಿಗೆ ತೋರಿಸಿದ್ದು, ಆ ಇಬ್ಬರು ಗಂಡಸರು ಸ್ವಲ್ಪ ಹೊತ್ತು ಮಾತನಾಡುತ್ತಾ, ಮೂಗುತಿಗಳನ್ನು ನೋಡಿ, ಅದರಲ್ಲಿದ್ದ 1 ಮೂಗುತಿ ಪ್ಯಾಕೇಟ್‌ ಅನ್ನು ಆ ಗಂಡಸರು ಕಳವು ಮಾಡಿಕೊಂಡು ಹೋಗಿದ್ದು, ಅದರಲ್ಲಿ ಅಂದಾಜು 20 ಗ್ರಾಂ ಚಿನ್ನದ ಮೂಗುತಿಗಳಿದ್ದು, ಕಳವಾದ ಸ್ವತ್ತಿನ ಅಂದಾಜು ಮೌಲ್ಯ ರೂ. 1,20,000/- ಆಗಬಹುದು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!