
ಅಜೆಕಾರು: ದಿನಾಂಕ: 28-04-2023(ಹಾಯ್ ಉಡುಪಿ ನ್ಯೂಸ್) ಜಾರ್ಕಳದಲ್ಲಿರುವ ಜಿ.ವಿ.ಪಿ ಇಂಪ್ರಾ ಪ್ರಾಜೆಕ್ಟ್ ಕಂಪೆನಿಗೆ ಅಕ್ರಮವಾಗಿ ನುಗ್ಗಿದ ಕೆಲವರು ಕಂಪೆನಿಯ ಸೊತ್ತುಗಳನ್ನು ನಾಶ ಮಾಡಿ ಸಿಬ್ಬಂದಿಗಳಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ
ಸುದೀಪ್ ಹೆಗ್ಡೆ ಎಂಬವರು ಕಾರ್ಕಳ ತಾಲೂಕು,ಮುಂಡ್ಲಿ ಗ್ರಾಮದ,ಜಾರ್ಕಳ ಎಂಬಲ್ಲಿರುವ ಜಿ.ವಿ.ಪಿ ಇಂಪ್ರಾ ಪ್ರಾಜೆಕ್ಟ್ ಕಂಪೆನಿಯಲ್ಲಿ ಮ್ಯಾನೇಜರ್ ಆಗಿದ್ದು, ದಿನಾಂಕ 27/04/2023 ರಂದು ಬೆಳಿಗ್ಗೆ ಸುಜಿತ್ ಕುಮಾರ್ ಶೆಟ್ಟಿ, ಕಿಶೋರ್, ಸುಭಾಷ್‌ಚಂದ್ರ ಹೆಗ್ಡೆ, ವಿವೇಕಾನಂದ ಶೆಣೈ, ಅಭಿಲಾಷ್, ಲಕ್ಷ್ಮೀನಾರಾಯಣ ಮಲ್ಯ ಹಾಗೂ ಇತರರು ಸೇರಿಕೊಂಡು ಜಿ.ವಿ.ಪಿ ಇಂಪ್ರಾ ಪ್ರಾಜೆಕ್ಟ್ ಕಂಪೆನಿ ಒಳಗೆ ಏಕಾಏಕಿ ಅಕ್ರಮ ಪ್ರವೇಶಮಾಡಿ ನಂತರ ಕಂಪೆನಿಯ ಸೊತ್ತುಗಳನ್ನು ನಾಶಗೊಳಿಸಿದ್ದು, ಹಾಗೂ ಸುದೀಪ್ ಹೆಗ್ಡೆಯವರಿಗೆ ಮತ್ತು ಕಂಪೆನಿ ಸಿಬ್ಬಂದಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಮತ್ತು ಸುದೀಪ್ ಹೆಗ್ಡೆಯವರ ಕುತ್ತಿಗೆಗೆ ಕೈಹಾಕಿ ದೂಡಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಿರುತ್ತಾರೆ ಎಂದು ಸುದೀಪ್ ಹೆಗ್ಡೆಯವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.