Spread the love

ಉಡುಪಿ: ದಿನಾಂಕ:23-04-2023(ಹಾಯ್ ಉಡುಪಿ ನ್ಯೂಸ್) ಐದು ಜನರ ಗುಂಪೊಂದು ಕಾರಿನಲ್ಲಿ ಬಂದು ಖಾಸಗಿ ಬಸ್ಸ್ ಒಂದನ್ನು ಅಡ್ಡ ಗಟ್ಟಿ ಕಂಡಕ್ಟರ್ ಗೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮರ್ಣೆ ,ಹೆರ್ಮುಂಡೆ ರಸ್ತೆಯ ಅಂಬಿಕಾ ನಿವಾಸದ ನಿವಾಸಿ ಸಹೇಜ್ ಎ.ಎಸ್ (25) ಎಂಬವರು KA20AA8755 ನೇ ಎಸ್‌ಎಂಎಂಎಸ್‌ ಎಂಬ ಖಾಸಗಿ ಬಸ್ಸಿನಲ್ಲಿ ಕಂಡೆಕ್ಟರ್‌ ಆಗಿ ಕೆಲಸ ಮಾಡಿಕೊಂಡಿದ್ದಾರೆನ್ನಲಾಗಿದೆ, ದಿನಾಂಕ 22/04/2023 ರಂದು ಎಂದಿನಂತೆ ಕೊನೆಯ ಟ್ರಿಪ್‌ ಉಡುಪಿಯಿಂದ ಅಜೆಕಾರಿಗೆ 5:00 ಗಂಟೆಗೆ ಉಡುಪಿ ಬಸ್‌ ನಿಲ್ದಾಣದಿಂದ ಹೊರಟು, ಸಂತೆಕಟ್ಟೆ ತಲುಪುವಾಗ, 5 ಜನರು ಒಂದು ಬಿಳಿ ಬಣ್ಣದ ಬೊಲೆರೊ ವಾಹನ ನಂಬ್ರ: KA19MA6372 ನೇದರಲ್ಲಿ ಬಂದು, ಸಂತೆಕಟ್ಟೆ ಪೋರ್ಸ್‌ ಶೋ ರೂಮ್‌ ಬಳಿ ಸಹೇಜ್ ರವರು ಕೆಲಸ ಮಾಡುವ ಬಸ್ಸಿಗೆ ತಮ್ಮ ವಾಹನವನ್ನು ಅಡ್ಡ ಇಟ್ಟು, ಎಲ್ಲರೂ ಇಳಿದು ಬಂದು, ʼನಿಮ್ಮ ಚಾಲಕನಿಗೆ ಏನು ಸೈಡ್‌ ಕೊಡಲು ಆಗುವುದಿಲ್ಲವಾʼ ಎಂದು ಹೇಳಿ 5 ಜನರು ಸೇರಿ ಸಹೇಜ್ ರಿಗೆ ಕೈಯಿಂದ ಕೆನ್ನೆಗೆ, ತಲೆಗೆ, ಬಿನ್ನಿಗೆ ಹೊಡೆದು, ಕಾಲಿನಿಂದ ತುಳಿದಿದ್ದು, ಮಕ್ಕಳೇ, ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲʼ ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂದು ಸಹೇಜ್ ರವರು ಪೊಲೀಸರಿಗೆ ದೂರಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 143, 147, 341, 323, 504, 506 ಜೊತೆಗೆ 149 IPC ಯಂತೆ ಪ್ರಕರಣ ದಾಖಲಾಗಿದೆ

error: No Copying!