ಉಡುಪಿ:, ದಿನಾಂಕ: 24.04.2023 (ಹಾಯ್ ಉಡುಪಿ ನ್ಯೂಸ್) ಪೆರಂಪಳ್ಳಿ ಶಿಮ್ರಾ ರಸ್ತೆ ಯಲ್ಲಿ ಗಾಂಜಾ ಸೇವನೆ ಮಾಡಿದ್ದ ಯುವಕನನ್ನು ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ತಾಲೂಕು, ಶಿವಳ್ಳಿ ಗ್ರಾಮದ ಪೆರಂಪಳ್ಳಿ ಶಿಮ್ರಾ ರಸ್ತೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿ ಕೀರ್ತಿ ಕುಮಾರ್.ಕೆ ಎಂಬಾತನನ್ನು ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಕೇಶವ ಗೌಡ ಅವರು ವಶಕ್ಕೆ ಪಡೆದು ಮಾದಕವಸ್ತು ಸೇವಿಸಿದ್ದ ಅನುಮಾನದ ಮೇರೆಗೆ ಮೆಡಿಕಲ್ ತಪಾಸಣೆಗೊಳಪಡಿಸಿ, ದಿನಾಂಕ 22.04.2023 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯಲ್ಲಿ ಆರೋಪಿ ಕೀರ್ತಿ ಕುಮಾರ್.ಕೆ ಈತನು ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟ ಮೇರೆಗೆ ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಕಲಂ 27 (b) ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.