ಮಣಿಪಾಲ: ದಿನಾಂಕ 20/04/2023 (ಹಾಯ್ ಉಡುಪಿ ನ್ಯೂಸ್) ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಮಾಂಡವಿ ಸ್ಕ್ವಾರ್ ನ ಅಂಗಡಿಯೊಂದರಲ್ಲಿ ನಿಷೇಧಿತ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ಯುವಕನೋರ್ವ ನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆ , ಪೊಲೀಸ್ ನಿರೀಕ್ಷಕ ರಾದ ದೇವರಾಜ್.ಟಿ.ವಿ ಅವರಿಗೆ ದಿನಾಂಕ:19-04-2023ರಂದು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಡಾ ವಿ ಎಸ್ ಆಚಾರ್ಯ ರಸ್ತೆ Mandavi Square ನ ರೂಮ್ ನಂಬರ್ 03 The Smoke Co. ಎಂಬ ಅಂಗಡಿಯಲ್ಲಿ ಅಕ್ರಮವಾಗಿ ನಿಷೇದಿತ ಇ – ಸಿಗರೇಟ್ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿದ್ದು,ಆ ಕೂಡಲೇ ಠಾಣೆಯ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿ ಅಂಗಡಿ ಮಾಲೀಕ ಆಪಾದಿತ ಮೊಹಮ್ಮದ್ ಉನೈಶ್, (24) ವಾಸ: ಕಾಜೂರ್ ಹೌಸ್ ಬಡಜೆ ಗ್ರಾಮ ಮಂಜೇಶ್ವರ ತಾಲೂಕು ಕಾಸರಗೋಡು ಕೇರಳ ರಾಜ್ಯ ಎಂಬಾತನು ನಡೆಸುತ್ತಿದ್ದ ಅಂಗಡಿಯಲ್ಲಿ ಅಕ್ರಮವಾಗಿರಿಸಿದ್ದ ನಿಷೇದಿತ 1) ELFBAR LOWIT 5500 ಎಂದು ನಮೂದು ಇರುವ 21 ಈ ಸಿಗರೇಟ್ ಗಳು ಅಂದಾಜು 31,500/- ಆಗಿರುತ್ತದೆ 2) YUOTO XXL ಎಂದು ನಮೂದು ಇರುವ 49 ಈ ಸಿಗರೇಟ್ ಗಳು ಅಂದಾಜು ಮೌಲ್ಯ – 49,000/- ಆಗಿರುತ್ತದೆ. 3) YUOTO THANDS BANANA ICE ಎಂದು ನಮೂದು ಇರುವ 8 ಈ ಸಿಗರೇಟ್ ಗಳು ಅಂದಾಜು ಮೌಲ್ಯ – 10,000/- ಆಗಿರುತ್ತದೆ. 4) LUSH ICE ಎಂದು ನಮೂದು ಇರುವ 3 ಈ ಸಿಗರೇಟ್ ಗಳು ಅಂದಾಜು ಮೌಲ್ಯ – 3750/- ಆಗಿರುತ್ತದೆ. 5) YUOTO THANOS Blue berry Ice ಎಂದು ನಮೂದು ಇರುವ 8 ಈ ಸಿಗರೇಟ್ ಗಳು ಅಂದಾಜು ಮೌಲ್ಯ – 10,000/- ಆಗಿರುತ್ತದೆ 6) FLFBAR BC5000 ಎಂದು ನಮೂದು ಇರುವ 3 ಈ ಸಿಗರೇಟ್ ಗಳು ಅಂದಾಜು ಮೌಲ್ಯ – 4,500/- 7) YUOTO 5000 PIFFS ಎಂದು ನಮೂದು ಇರುವ 3 ಈ ಸಿಗರೇಟ್ ಗಳು ಅಂದಾಜು ಮೌಲ್ಯ – 3,750/- 8) CALIBURN ಎಂದು ನಮೂದು ಇರುವ ಈ ಸಿಗರೇಟ್ 1 ಅಂದಾಜು ಮೌಲ್ಯ – 2,000/- 9) ELFBAR TE6000 ಎಂದು ನಮೂದು ಇರುವ ಈ ಸಿಗರೇಟ್ 1 ಅಂದಾಜು ಮೌಲ್ಯ – 1,500/- 10) YUOTO THANDS BANANA ICE 5000 PUFFS ಎಂದು ನಮೂದು ಇರುವ 2 ಈ ಸಿಗರೇಟ್ ಗಳು ಅಂದಾಜು ಮೌಲ್ಯ – 2,000/- 11) ESSY ಎಂದು ಬರೆದಿರುವ ಸಿಗರೇಟ್-14 ಪ್ಯಾಕೇಟ್ ಗಳು ಅಂದಾಜು ಮೌಲ್ಯ 5500/- 12) Manchester ಎಂದು ಬರೆದಿರುವ ಸಿಗರೇಟ್-05 ಪ್ಯಾಕೇಟ್ ಗಳು ಅಂದಾಜು ಮೌಲ್ಯ 2000/- 13) Block ಎಂದು ಬರೆದಿರುವ ಸಿಗರೇಟ್-04 ಪ್ಯಾಕೇಟ್ ಗಳು ಅಂದಾಜು ಮೌಲ್ಯ 1600/- 14) Mond ಎಂದು ಬರೆದಿರುವ ಸಿಗರೇಟ್-3 ಪ್ಯಾಕೇಟ್ ಗಳು ಅಂದಾಜು ಮೌಲ್ಯ 1200/- 15) DUNHILL Switch ಎಂದು ಬರೆದಿರುವ ಸಿಗರೇಟ್-2 ಪ್ಯಾಕೇಟ್ ಗಳು ಅಂದಾಜು ಮೌಲ್ಯ 800/- ಆಗಿರುತ್ತದೆ ಎನ್ನಲಾಗಿದೆ.
ಇವುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿರುತ್ತಾರೆ. ಸ್ವಾಧೀನಪಡಿಸಿಕೊಂಡ ಸಿಗರೇಟ್ ಮತ್ತು ಇ – ಸಿಗರೇಟ್‌ಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ 1,29,100/-ಆಗಿರುತ್ತದೆ ಎನ್ನಲಾಗಿದೆ. ಈ ಬಗ್ಗೆ ಮೊಹಮ್ಮದ್ ಉನೈಶ್ ಮೇಲೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 7(iv) 7, 8 Prohibition of Electronic Cigarettes Act 2019 ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.