Spread the love

ಮಣಿಪಾಲ: ದಿನಾಂಕ: 20.04.2023 (ಹಾಯ್ ಉಡುಪಿ ನ್ಯೂಸ್) ನಿಷೇಧಿತ ಇ-ಸಿಗರೇಟನ್ನು ಮಾರಾಟ ಮಾಡುತ್ತಿದ್ದ ಮಣಿಪಾಲದ ಅಂಗಡಿ ಮಾಲಕನೋರ್ವನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಮಣಿಪಾಲ ಪೊಲೀಸ್‌ ಠಾಣೆ, ಪೊಲೀಸ್ ನಿರೀಕ್ಷಕ ರಾದ ದೇವರಾಜ್ ಟಿ.ವಿ. ಇವರಿಗೆ ದಿನಾಂಕ:18-04-2023 ರಂದು ಸಾರ್ವಜನಿಕ ರಿಂದ ಬಂದ ಖಚಿತ ವರ್ತಮಾನ ದಂತೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಎಂಒ ಜಿ ಆರ್ಕೇಡ್ ಬಿಲ್ಡಿಂಗ್ ನ ಶ್ರೀಶ ಪ್ಯಾರಿಡೈಸ್ ಎಂಬ ಅಂಗಡಿಯಲ್ಲಿ ಅಕ್ರಮವಾಗಿ ನಿಷೇದಿತ ಇ – ಸಿಗರೇಟ್‌  ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದ್ದು ಕೂಡಲೇ ಠಾಣೆಯ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಆಪಾದಿತ ಅಬ್ದುಲ್‌ ಖಾದರ್‌ ಅನ್ಸಾರ್‌, ಪ್ರಾಯ:27ವರ್ಷ, ವಾಸ: ಪುರುಶೋಂಗಡಿ ಹೌಸ್‌,‌ ವಾರ್ಕಾಡಿ ಗ್ರಾಮ ಮತ್ತು ಪೋಸ್ಟ್‌ ಮಂಜೇಶ್ವರ ತಾಲೂಕು ಕಾಸರಗೋಡು ಕೇರಳ ರಾಜ್ಯ ಎಂಬಾತನು ನಡೆಸುತ್ತಿದ್ದ ಅಂಗಡಿಯಲ್ಲಿ ಅಕ್ರಮವಾಗಿರಿಸಿದ್ದ ನಿಷೇದಿತ 1) MOND ಎಂದು ಬರೆದಿರುವ 8 ಪ್ಯಾಕೆಟ್‌ ಇದ್ದು ಅದರ ಒಳಗೆ 80 ಸೀಗರೇಟ ಇರುತ್ತವೆ ಇದರ ಅಂದಾಜು 1600/- ಆಗಿರುತ್ತದೆ 2) ESSE ಎಂದು ಬರೆದಿರುವ  6 ಪ್ಯಾಕೆಟ್‌ ಇದ್ದು ಅದರಲ್ಲಿ ಸುಮಾರು 65 ಸಿಗರೇಟ್ ಇರುತ್ತವೆ ಅಂದಾಜು ಮೌಲ್ಯ ರೂ.  1,300/- ಆಗಿರುತ್ತದೆ. 3) Super GRAND ಎಂದು ಬರೆದಿರುವ 1 ಪ್ಯಾಕೆಟ್‌  ಇದ್ದು ಅದರ ಒಳಗೆ 16 ಸಿಗರೇಟ್ ಇರುತ್ತವೆ ಅಂದಾಜು ಮೌಲ್ಯ. ರೂ. 320/- ಆಗಿರುತ್ತದೆ. 4) PINE ಎಂದು ಬರೆದಿರುವ 1 ಪ್ಯಾಕೇಟ್‌ ಇದ್ದು ಅದರ ಒಳಗೆ 14 ಸಿಗರೇಟ್ ಇರುತ್ತವೆ ಅಂದಾಜು ಮೌಲ್ಯ. ರೂ. 280/- ಆಗಿರುತ್ತದೆ. 5) NAPOLI  ಎಂದು ಬರೆದಿರುವ 1 ಪ್ಯಾಕೇಟ್‌  ಅದರ ಒಳಗೆ 14 ಸಿಗರೇಟ್ ಇರುತ್ತವೆ ಅಂದಾಜು ಮೌಲ್ಯ. ರೂ. 300/- ಆಗಿರುತ್ತದೆ 6) IGET ಎಂದು ಬರೆದಿರುವ ಇ – ಸಿಗರೇಟ್‌ – 02 ಇದ್ದು ಅಂದಾಜು ಮೌಲ್ಯ 4,800/- 7) Youto THANOS 5000 PUFFS ಎಂದು ಬರೆದಿರುವ ಇ – ಸಿಗರೇಟ್‌ -04 ಅಂದಾಜು ಮೌಲ್ಯ ರೂ 10,400/- ಆಗಿರುತ್ತದೆ 8) ELFBAR TE6000 ಎಂದು ಬರೆದಿರುವ ಇ – ಸಿಗರೇಟ್‌ – 01 ಇದರ ಅಂದಾಜು ಮೌಲ್ಯ ರೂ 2,800/- ಆಗಿರುತ್ತದೆ ಇವುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿರುತ್ತಾರೆ. ಸ್ವಾಧೀನಪಡಿಸಿಕೊಂಡ ಸಿಗರೇಟ್‌ ಮತ್ತು ಇ – ಸಿಗರೇಟ್‌ಗಳ ಒಟ್ಟು ಅಂದಾಜು ಮೌಲ್ಯ ರೂ. 21,800/- ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕಲಂ: 7(iv) 7, 8 Prohibition of Electronic Cigarettes Act 2019 ರಂತೆ   ಪ್ರಕರಣ ದಾಖಲಾಗಿದೆ.

error: No Copying!