ಉಡುಪಿ: ದಿನಾಂಕ:21.04.2023 (ಹಾಯ್ ಉಡುಪಿ ನ್ಯೂಸ್) ಮೂಡನಿಡಂಬೂರು ಗ್ರಾಮದ ಸರಸ್ವತಿ ಶಾಲೆಯ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಾದಕವಸ್ತು ಮಾರಾಟ ಮಾಡಲು ಕಾಯುತ್ತಿದ್ದ ವ್ಯಕ್ತಿಯೋರ್ವ ನನ್ನು ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ
ಉಡುಪಿ ಸೆನ್ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ದಿನಾಂಕ: 20-04-2023ರಂದು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸರಸ್ವತಿ ಶಾಲೆಯ ಬಳಿಯ ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ವಸ್ತು Methamphetamine Drug ಮಾರಾಟ ಮಾಡಲು ವ್ಯಕ್ತಿಯೋರ್ವ ಕಾಯುತ್ತಿರುವುದಾಗಿ ಗುಪ್ತ ಮಾಹಿತಿ ಬಂದಿದ್ದು; ಕೂಡಲೇ ಸೆನ್ ಠಾಣೆಯ ಪೊಲೀಸರು ಆ ಸ್ಥಳಕ್ಕೆ ದಾಳಿ ನಡೆಸಿ ಅಲ್ಲಿ ಕಾನೂನು ಬಾಹಿರವಾಗಿ ಮಾದಕವಸ್ತುವನ್ನು ಹೊಂದಿದ್ದ ಮೊಹಮ್ಮದ್ ಅಫ್ವಾನ್ ಎಂಬುವವನನ್ನು ದಾಳಿ ನಡೆಸಿ, ಬಂಧಿಸಿ ಆರೋಪಿಯಿಂದ 5.23 ಗ್ರಾಂ ತೂಕದ Methamphetamine Drug, ಮೊಬೈಲ್ ಪೋನ್- 1, ಪೌಡರ್ ಪ್ಯಾಕ್ ಮಾಡಲು ಬಳಸುವ ಸಣ್ಣ ಪ್ಲಾಸ್ಟಿಕ್ ಕವರ್-10 ನ್ನು ವಶಪಡಿಸಿ ಕೊಂಡಿರುತ್ತಾರೆ. ಸ್ವಾಧೀನಪಡಿಸಿಕೊಂಡ Methamphetamine Durgನ ಅಂದಾಜು ಮೌಲ್ಯ ರೂ. 20,000/- ಆಗಿರುತ್ತದೆ. ಸ್ವಾಧೀನಪಡಿಸಿಕೊಂಡಿರುವ ಮೊಬೈಲ್ ಪೋನ್ ಅಂದಾಜು ಮೌಲ್ಯ ರೂ. 2000/-, ಸ್ವಾಧೀನಪಡಿಸಿಕೊಂಡಿರುವ ಎಲ್ಲಾ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 22,000/- ಆಗಿರುತ್ತದೆ ಎನ್ನಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಕಲಂ : 22(B), ಎನ್.ಡಿ.ಪಿ. ಎಸ್. ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.