Spread the love

ಮಲ್ಪೆ: ದಿನಾಂಕ:19-04-2023(ಹಾಯ್ ಉಡುಪಿ ನ್ಯೂಸ್) ಮೂಡುತೋನ್ಸೆ ಗ್ರಾಮದ ಹಂಪನಕಟ್ಟೆ ಚೆಕ್ ಪೋಸ್ಟ್ ನಲ್ಲಿ ಪರವಾನಿಗೆ ಇಲ್ಲದೆ ಕಾರಿನಲ್ಲಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿ ಯೋರ್ವ ನ ಮೇಲೆ ಚುನಾವಣಾಧಿಕಾರಿ ಹಾಗೂ ಪೊಲೀಸರು ಕೇಸು ದಾಖಲಿಸಿದ್ದಾರೆ

ಕರ್ನಾಟಕ ರಾಜ್ಯದ 2023 ನೇ ಸಾಲಿನ ವಿಧಾನ ಸಭಾ ಕ್ಷೇತ್ರಗಳ ಸಾರ್ವತ್ರಿಕ ಚುನಾವಣೆಯ ಬಗ್ಗೆ ಉಡುಪಿ ಜಿಲ್ಲೆಯ ಉಡುಪಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ಕರ್ತವ್ಯದ  ಬಗ್ಗೆ ಶಾಲಿನ್ ಡಿ ಕೋಸ್ತಾ ಅವರು ಮಾನ್ಯ ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ ಇವರ ಆದೇಶದಂತೆ ಸರ್ಪ್ರೈಸ್ ಚೆಕ್ ಪೋಸ್ಟ್ ಕರ್ತವ್ಯದ ಬಗ್ಗೆ ಮಲ್ಪೆ ಠಾಣಾ ವ್ಯಾಪ್ತಿಯ  ಮೂಡುತೋನ್ಸೆ ಗ್ರಾಮದ ಹಂಪನ ಕಟ್ಟೆ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿ ಮಲ್ಪೆ ಪೊಲೀಸ್ ಠಾಣಾ ಸಿಬ್ಬಂದಿಯವರೊಂದಿಗೆ ವಾಹನ ತಪಾಸಣೆ  ಕರ್ತವ್ಯದಲ್ಲಿ ಇರುವಾಗ ರಾತ್ರಿ 7:00 ಗಂಟೆ ಸಮಯಕ್ಕೆ ಕೆಮ್ಮಣ್ಣುವಿನಿಂದ ನೇಜಾರಿನ ಕಡೆಗೆ ಬರುತ್ತಿದ್ದ KA 20 Z 9295 ನೇ ಕಾರು ಬರುತ್ತಿದ್ದು. ಆ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಕಾರಿನ ಹಿಂಬದಿ ಸೀಟಿನಲ್ಲಿ ಒಂದು ಪ್ಲಾಸ್ಟಿಕ್ ತೊಟ್ಟೆ ಇದ್ದು ಆ ತೊಟ್ಟೆಯನ್ನು ಪೊಲೀಸರು ಪರಿಶೀಲಿಸಿದಾಗ ಅದರ ತುಂಬಾ ಮದ್ಯದ ಬಾಟಲಿಗಳಿದ್ದು ಈ ಬಗ್ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಹೆಸರು ವಿಳಾಸವನ್ನು ಪೊಲೀಸರು ವಿಚಾರಿಸಿದಾಗ ಆತ ಗಿರಿಧರ ಬಾಳಿಗ ಪ್ರಾಯ: 56 ವರ್ಷ ,ವಾಸ: ಕಲ್ಯಾಣಪುರ ಮಖ್ಯ ರಸ್ತೆ ಮೂಡುತೋನ್ಸೆಗ್ರಾಮ ಉಡುಪಿ ಎಂದು ತಿಳಿಸಿದ್ದು, ಅಗತ್ಯ ಪ್ರಮಾಣಕ್ಕಿಂತ ಹೆಚ್ಚಿನ ಮದ್ಯ ಕಾರಿನಲ್ಲಿದ್ದು ಸರಿಯಾದ ಬಿಲ್ಲನ್ನು ಹೊಂದಿರದ ಗಿರಿಧರ ಬಾಳಿಗ ಇವರು ಒಟ್ಟು 6,750 ML ಮದ್ಯವನ್ನು ಹೊಂದಿದ್ದು ಇದು ಸ್ವಾದೀನತೆಯ ಪ್ರಮಾಣಕ್ಕಿಂತ ಹೆಚ್ಚಾಗಿರುತ್ತದೆ ಹಾಗೂ ಸಾಗಾಟ ಮಾಡಲು ಯಾವುದೇ ಪರವಾನಿಗೆ ಹೊಂದಿರುವುದಿಲ್ಲ. ಪೊಲೀಸರು ಮದ್ಯ ದ ಬಾಟಲಿಗಳನ್ನು ವಶಪಡಿಸಿ ಕೊಂಡಿದ್ದು;ಸ್ವಾದೀನ ಪಡಿಸಿಕೊಂಡ ಮದ್ಯದ ಬಾಟಲಿಯ ಒಟ್ಟು ಮೌಲ್ಯ 13,280 ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಅಕ್ರಮವಾಗಿ ಮಧ್ಯ ಸಾಗಾಟ ಮಾಡುತ್ತಿದ್ದ KA 20 Z 9295 ನೇ  TIANIUM- TDCI-ECO SPORT ಕಾರನ್ನು ಪೊಲೀಸರು ಸ್ವಾದೀನ ಪಡಿಸಿಕೊಂಡಿದ್ದು ಸ್ವಾದೀನ ಪಡಿಸಿಕೊಂಡ KA 20 Z 9295 ನೇ  TIANIUM- TDCI-ECO SPORT ಕಾರಿನ ಅಂದಾಜು ಮೌಲ್ಯ ರೂಪಾಯಿ 3,00,000 ಆಗಬಹುದು ಎನ್ನಲಾಗಿದೆ.  ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ 32 , 34 KE ACT ನಂತೆ ಪ್ರಕರಣ ದಾಖಲಾಗಿರುತ್ತದೆ

error: No Copying!