Spread the love

ಬ್ರಹ್ಮಾವರ: ದಿನಾಂಕ 18/04/2023 (ಹಾಯ್ ಉಡುಪಿ ನ್ಯೂಸ್) ಚೇರ್ಕಾಡಿ ಗ್ರಾಮದ ನೂಜಿಬೈಲು ಎಂಬಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಬ್ರಹ್ಮಾವರ ಪೊಲೀಸ್‌ ಠಾಣೆ , ಪೊಲೀಸ್ ಉಪ ನಿರೀಕ್ಷಕರಾದ ಮಹಾಂತೇಶ್ ಉದಯ ನಾಯಕ್ ಇವರು ದಿನಾಂಕ:17-04-2023ರಂದು ರೌಂಡ್ಸ್  ಕರ್ತವ್ಯದಲ್ಲಿರುವಾಗ ಚೇರ್ಕಾಡಿ  ಗ್ರಾಮದ ನೂಜಿಬೈಲು ಎಂಬಲ್ಲಿ ಗ್ರೇಗೊರಿ ಡಿ ಆಲ್ಮೇಡಾ ಎಂಬವರು ಮನೆಯ ಬಳಿ ಅಕ್ರಮವಾಗಿ ಪರವಾನಿಗೆ ಇಲ್ಲದೆ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿಯ ಮೇರೆಗೆ ಆರೋಪಿ ಗ್ರೆಗೋರಿ ಡಿ ಆಲ್ಮೇಡಾ ಎಂಬವರ ಮನೆಯ ಬಳಿ  ಪೊಲೀಸರು ಹೋದಾಗ ,  ಓಡಿ ಹೋಗಲು ಪ್ರಯತ್ನಿಸಿದ ಆರೋಪಿ ಗ್ರೇಗೋರಿ ಡಿ ಆಲ್ಮೇಡಾ (64), ವಾಸ: ನೂಜಿಬೈಲ್‌, ಮಡಿ, ಚೇರ್ಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಎಂಬಾತನನ್ನು ಪೊಲೀಸ್ ಸಿಬ್ಬಂದಿಯವರ ಸಹಾಯದಿಂದ ಬಂಧಿಸಿ ವಿಚಾರಣೆ ನಡೆಸಿದಾಗ, ಆತನು ತಾನು ತನ್ನ ಮನೆಯ ಹಟ್ಟಿಯ ಬಳಿ ಅಕ್ರಮವಾಗಿ ಕಳ್ಳಭಟ್ಟಿಯನ್ನು ತಯಾರಿಸಿ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿರುತ್ತಾನೆ ಎನ್ನಲಾಗಿದೆ. ಹಾಗೂ ಆತನ ಮನೆಯ ಹಟ್ಟಿಯ ಗೊಬ್ಬರ ಗುಂಡಿಯ ಬಳಿಯಲ್ಲಿ ಸಿಕ್ಕಂತಹ 1)  20 ಲೀಟರ್‌ ನಷ್ಟು ಕಳ್ಳಭಟ್ಟಿ ತಯಾರಿಸುವ ಕೊಳೆ ತುಂಬಿರುವ ನೀಲಿ ಬಣ್ಣದ ಕಪ್ಪು ಮುಚ್ಚಳವಿರುವ ಪ್ಲಾಸ್ಟಿಕ್‌ ಬ್ಯಾರೆಲ್‌, 2) ಕಳ್ಳಭಟ್ಟಿ ಕಾಯಿಸಲು ಬಳಸುವ ಒಂದು ಆಲ್ಯೂಮಿನಿಯಮ್‌ ಪಾತ್ರೆ, 3) 2.25 ಲೀಟರ್‌ನ ಬಾಟಲಿಯಲ್ಲಿ ಕಳ್ಳಭಟ್ಟಿ ಪೂರ್ತಿ ತುಂಬಿದ ಪ್ಲಾಸ್ಟಿಕ್‌ಬಾಟಲಿ-1, 4) 2.25 ಲೀಟರ್‌ನ  ಬಾಟಲಿಯಲ್ಲಿ ¾ ಲೀಟರ್‌ನಷ್ಟು ಕಳ್ಳಭಟ್ಟಿ ತುಂಬಿರುವ ಬಾಟಲಿ-1 ಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸ್ವತ್ತುಗಳ ಮೌಲ್ಯ  2500/- ಅಗಿರುತ್ತದೆ ಎನ್ನಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಆರೋಪಿ ಯ ಮೇಲೆ ಕಲಂ: 13, 14, 32(1), 34 KE ACT  ರಂತೆ ಪ್ರಕರಣ ದಾಖಲಾಗಿದೆ.

error: No Copying!