Spread the love

ಕುಂದಾಪುರ: ದಿನಾಂಕ : 17/04/2023 (ಹಾಯ್ ಉಡುಪಿ ನ್ಯೂಸ್) ತಲ್ಲೂರು ಗ್ರಾಮದ ಪ್ರವಾಸಿ ಬಾರ್ ಬಳಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ವ್ಯಕ್ತಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರ ಪೊಲೀಸ್‌ ಠಾಣೆ ಎಸ್.ಐ ಯವರಾದ ಈರಯ್ಯ ಡಿ ಎನ್ ಅವರು ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಯವರೊಂದಿಗೆ ದಿನಾಂಕ: 16-04-2023 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸಾರ್ವಜನಿಕರೊಬ್ಬರು ಕರೆ ಮಾಡಿ ತಲ್ಲೂರ್ ಗ್ರಾಮದ ಪ್ರವಾಸಿ ಬಾರ್ ಬಳಿ ಓರ್ವ ಗಾಂಜಾ ಸೇವನೆ  ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದು ಅದರಂತೆ, ಸಿಬ್ಬಂದಿಯವರೊಂದಿಗೆ ಕೂಡಲೇ ಆ ಸ್ಥಳಕ್ಕೆ ತೆರಳಿ ನೋಡಿದಾಗ ಅಲ್ಲಿ ಓರ್ವ ವ್ಯಕ್ತಿ ತೂರಾಡಿಕೊಂಡು ಅಮಲಿನಲ್ಲಿರುವುದು ಪೊಲೀಸರಿಗೆ ಕಂಡುಬಂದಿದ್ದು, ಆತನನ್ನು ಪೊಲೀಸರು  ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಮಹಮ್ಮದ್‌ ಇರ್ಷಾದ ಎಂಬ ಆತನನ್ನು ಬಂಧಿಸಿ ವೈದ್ಯಕೀಯ ತಪಾಸಣೆ ಬಗ್ಗೆ ಶ್ರೀ ಮಾತಾ  ಆಸ್ಪತ್ರೆ ಕುಂದಾಪುರದ  ವೈದ್ಯಾಧಿಕಾರಿಯವರ  ಮುಂದೆ ಹಾಜರುಪಡಿಸಿದ್ದು, ಆತನನ್ನು ಪರೀಕ್ಷಿಸಿದ ವೈದ್ಯರು ಮಹಮ್ಮದ್ ಇರ್ಷಾದ್ ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ  ದಿನಾಂಕ: 16/04/2023 ರಂದು ವರದಿ ನೀಡಿರುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಕಲಂ: 27(b)   NDPS Act  ನಂತೆ ಪ್ರಕರಣ ದಾಖಲಾಗಿದೆ.

error: No Copying!