ಪಡುಬಿದ್ರಿ: ದಿನಾಂಕ:17-04-2023(ಹಾಯ್ ಉಡುಪಿ ನ್ಯೂಸ್) ಚುನಾವಣಾ ವಿಭಾಗದಿಂದ ಪೂರ್ವಾನುಮತಿ ಪಡೆಯದೆ ಸಭೆ ನಡೆಸಿ ನೂರು ಜನರಿಗೆ ಚಹಾ,ತಿಂಡಿ ವಿತರಿಸಿರುವ ಆರೋಪದ ಮೇಲೆ ಶ್ರೀಕಾಂತ್ ನಾಯಕ್ ಎಂಬವರ ಮೇಲೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ 121-ಕಾಪು ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ 3 ನೇ ತಂಡದ ಅಧಿಕಾರಿಯಾಗಿರುವ ಮುಸ್ತಾಫ್(40) ಎಂಬವರಿಗೆ ದಿನಾಂಕ 16/04/2023 ರಂದು ಬೆಳಿಗ್ಗೆ 10:50 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯ ಚುನಾವಣಾ ವಿಭಾಗದಿಂದ ಬಂದ ದೂರಿನಂತೆ ಕಾಪು ತಾಲೂಕು ಬಡಾ ಗ್ರಾಮದ ಉಚ್ಚಿಲದಲ್ಲಿರುವ ಮಾಧವ ಮಂಗಳ ಸಭಾಭವನ ,ಮೊಗವೀರ ಭವನದಲ್ಲಿ ಭಾರತೀಯ ಜನತಾ ಪಾರ್ಟಿಯ ಪರವಾಗಿ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸುತ್ತಿರುವ ವ್ಯಕ್ತಿಗಳಿಗೆ ಮಹಾಲಕ್ಷ್ಮಿ ಸಭಾ ಭವನ ಉಚ್ಚಿಲ ಇಲ್ಲಿ ಕಾಪು ತಾಲೂಕು ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಶ್ರೀಕಾಂತ್‌ನಾಯಕ್ ರವರು ಯಾವುದೇ ಅನುಮತಿ ಪಡೆಯದೇ ಸುಮಾರು100 ಜನರಿಗೆ ಚಹಾ, ಇಡ್ಲಿ, ವಡೆ, ಸಾಂಬಾರ್ ಉಪಹಾರ ವಿತರಿಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವರದಿಯೊಂದಿಗೆ ಪೊಲೀಸರಿಗೆ ದೂರು ನೀಡಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 171(ಇ) ಐಪಿಸಿಯಂತೆ ಪ್ರಕರಣ ದಾಖಲಾಗಿದೆ.