ಹಿರಿಯಡ್ಕ: ದಿನಾಂಕ: 17/04/2023(ಹಾಯ್ ಉಡುಪಿ ನ್ಯೂಸ್) ಮುತ್ತುರ್ಮೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಹಿರಿಯಡಕ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಅನಿಲ್ ಬಿ ಮಾದರ ಅವರು ದಿನಾಂಕ:16-04-2023 ರಂದು ಠಾಣೆಯಲ್ಲಿ ಇರುವಾಗ ಪೆರ್ಡೂರು ಗ್ರಾಮದ ಮುತ್ತುರ್ಮೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರನ್ನು ಸೇರಿಸಿಕೊಂಡು ಮಟ್ಕಾ ಜುಗಾರಿ ಆಟ ಆಡುತ್ತಿರುವುದಾಗಿ ಗುಪ್ತ ಮಾಹಿತಿ ದೊರೆತ ಮೇರೆಗೆ ಕೂಡಲೇ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಕೃಷ್ಣ ಹರಿಜನ (40) ಎಂಬಾತನನ್ನು ಬಂಧಿಸಿ,ವಶಕ್ಕೆ ಪಡೆದು ಆತ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ನಗದು ಹಣ 1395/- ರೂಪಾಯಿ , ಮಟ್ಕಾ ನಂಬ್ರ ಬರೆದ ಚೀಟಿ-1, ಹಾಗೂ ಬಾಲ್ ಪೆನ್ನು -1ನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ: 78 (I)(III) KP ACT ರಂತೆ ಪ್ರಕರಣ ದಾಖಲಾಗಿದೆ.