- ಕಾರ್ಕಳ: ದಿನಾಂಕ:15-04-2023(ಹಾಯ್ ಉಡುಪಿ ನ್ಯೂಸ್) ಬಜಗೋಳಿ ಪೇಟೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ನಿರತನಾಗಿದ್ದ ಯುವಕನನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
- ದಿನಾಂಕ 13/04/2023 ರಂದು ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿ ಪೇಟೆಯಲ್ಲಿರುವ ಬಸ್ಸು ನಿಲ್ದಾಣದ ಬಳಿ ಇರುವ ಲಕ್ಷ್ಮೀ ವೈನ್ಸ್ ಶಾಪ್ ಪಕ್ಕದ ರಸ್ತೆಯಲ್ಲಿ ಆರೋಪಿ ದೇವೇಂದ್ರ ಶೆಟ್ಟಿ ಎಂಬಾತನು, ತನ್ನ ಸ್ವಂತ ಲಾಭಕ್ಕೋಸ್ಕರ ಬೈಕ್ ನಂಬ್ರ KA-20 ER-6394 ನೇಯದರ ಮೇಲೆ ಕುಳಿತು ಕೆಲವು ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು IPL ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ತನ್ನ ಮೊಬೈಲ್ ನಲ್ಲಿ ಲೋಟಸ್ ಆ್ಯಪ್ ಮೂಲಕ ಪಂದ್ಯವನ್ನು ವೀಕ್ಷಿಸಿಸುತ್ತಾ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹಣ ಹಾಕಿದರೆ, ಹೆಚ್ಚು ಹಣವನ್ನು ಕೊಡುವುದಾಗಿ, ಸಾರ್ವಜನಿಕರಿಗೆ ಹೇಳಿ ಅವರಿಂದ ಹಣವನ್ನು ಪಡೆದು ಬೆಟ್ಟಿಂಗ್ ಜೂಜಾಟ ನಡೆಸುತ್ತಿರುವುದಾಗಿ ಸಾರ್ವಜನಿಕ ರಿಂದ ಬಂದ ಖಚಿತ ಮಾಹಿತಿಯಂತೆ ಕಾರ್ಕಳ ಗ್ರಾಮಾಂತರ ಠಾಣೆ ಪಿಎಸ್ಐ ಯವರಾದ ತೇಜಸ್ವಿ ಅವರು ಸಿಬ್ಬಂಧಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ಕೂಡಲೇ ದಾಳಿ ನಡೆಸಿದಾಗ, ಮಧು ಅಜೆಕಾರು, ಪ್ರಭಾಕರ ನೆಲ್ಲಿಕಾರ್, ಕರ್ಣ ನಲ್ಲೂರು ಹಾಗೂ ನವೀನ್ ಬಜಗೋಳಿ ಎಂಬವರುಗಳು ಸ್ಥಳದಿಂದ ಓಡಿ ಹೋಗಿದ್ದು, ಆರೋಪಿ ದೇವೇಂದ್ರ ಶೆಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದು ಆರೋಪಿಯು ಕೃತ್ಯಕ್ಕೆ ಬಳಸಿದ oppo ಕಂಪೆನಿಯ Android ಪೋನ್ -1, ACE ಕಂಪೆನಿಯ ಕೀ ಪ್ಯಾಡ್ ಪೋನ್-1 ಹಾಗೂ Itel ಕಂಪೆನಿಯ ಕೀ ಪ್ಯಾಡ್ ಪೋನ್-1 ನ್ನು ಮತ್ತು IPL ಕ್ರಿಕೆಟ್ ಬೆಟ್ಟಿಂಗ್‌ನಿಂದ ಸಾರ್ವಜನಿಕರಿಂದ ಸಂಗ್ರಹಿಸಿದ 25,000/- ರೂಪಾಯಿ ನಗದು ಹಾಗೂ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- .