Spread the love

ಮಣಿಪಾಲ: ದಿನಾಂಕ 15-04-2023(ಹಾಯ್ ಉಡುಪಿ ನ್ಯೂಸ್) ಮಣಿಪಾಲದ ಈಶ್ವರ ನಗರದಲ್ಲಿ ಯುವಕನೋರ್ವ ಮಾರಾಟ ಮಾಡಲೆಂದು ತಂದಿರಿಸಿದ್ದ ಗಾಂಜಾ ಸಹಿತ ಈರ್ವರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ 14/04/2023 ರಂದು ಮಣಿಪಾಲ ಪೊಲೀಸ್ ಠಾಣೆ ಪೋಲಿಸ್ ನಿರೀಕ್ಷಕರಾದ ದೇವರಾಜ್ ಟಿ.ವಿ, ಅವರಿಗೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ  ಈಶ್ವರ ನಗರ ಎಂಬಲ್ಲಿರುವ OPULENCE Recidency ಯ 2ನೇ ಮಹಡಿಯಲ್ಲಿರುವ ರೂಮ್‌ ನಂಬರ್‌ 207 ರಲ್ಲಿ  ಓರ್ವ ವ್ಯಕ್ತಿ ಮಾರಾಟ ಮಾಡುವ ಉದ್ದೇಶದಿಂದ ಮಾದಕ ವಸ್ತುವನ್ನು ಇಟ್ಟು ಕೊಂಡಿದ್ದಾನೆ ಎಂದು ಖಚಿತ ಮಾಹಿತಿ ಲಭಿಸಿದ್ದು ,ಆ ಕೂಡಲೇ ಪೊಲೀಸರು ಆ ಸ್ಥಳಕ್ಕೆ ದಾಳಿ ನಡೆಸಿ ಆಪಾದಿತ ಪ್ರಾಂಜಲ್‌ (22) ನನ್ನು ಬಂಧಿಸಿದ್ದಾರೆ.

ಪ್ರಾಂಜಲ್ ಮೂಲತಃ ವೆಸ್ಟ್ ಬೆಂಗಾಲದ ನಿವಾಸಿ ಯಾಗಿದ್ದು ಹಾಲಿ ವಾಸ:  ರೂಮ್‌ ನಂಬರ್‌ 207,  2ನೇ ಮಹಡಿ, OPULENCE Recidency ಈಶ್ವರ ನಗರ ಹೆರ್ಗಾ ಗ್ರಾಮ ಉಡುಪಿ ತಾಲೂಕು ಆಗಿದ್ದು ,ಆತನ ರೂಂನ ಕಬ್ಬಿಣದ ಕಪಾಟಿ ನಲ್ಲಿದ್ದ 123 ಗ್ರಾಂ ತೂಕದ ಗಾಂಜಾ (ಪ್ಲಾಸ್ಟಿಕ್ ಕವರ್‌ಸಮೇತ)‌,  ಮತ್ತು ಆತನ ವಶದಲ್ಲಿದ್ದ ಮೊಬೈಲ್ ಪೋನ ನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಗಾಂಜಾ ಸ್ವತ್ತಿನ ಮೌಲ್ಯ ರೂಪಾಯಿ 6250/-  ಆಗಿರುತ್ತದೆ ಎನ್ನಲಾಗಿದೆ. ಮಾದಕ ವಸ್ತುವನ್ನು ಅಕ್ಷಯ್ , ವಾಸ: ರೂಮ್ ನಂಬರ್ 6 ಜನತಾ ಟವರ್ಸ ಈಶ್ವರನಗರ  ಎಂಬಾತನು ಆಪಾದಿತ ಪ್ರಾಂಜಲ್‌ ಪ್ರಾಯಸ್ ನಿಗೆ ಮಾರಾಟ ಮಾಡಲು ನೀಡಿರುತ್ತಾನೆ ಎನ್ನಲಾಗಿದೆ.  ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಈರ್ವರ ಮೇಲೆ ಕಲಂ:8(c) 20(b)(II)(A) NDPS ರಂತೆ ಪ್ರಕರಣ ದಾಖಲಾಗಿರುತ್ತದೆ.  

error: No Copying!