Spread the love
  • ಕಾಪು:  ದಿನಾಂಕ: 15/04/2023(ಹಾಯ್ ಉಡುಪಿ ನ್ಯೂಸ್) ಕಾಪು ಪೇಟೆಯ ಮಾರುಕಟ್ಟೆಯಲ್ಲಿ ಮಟ್ಕಾ ಜುಗಾರಿ ಆಟದಲ್ಲಿ ನಿರತನಾಗಿದ್ದ ವ್ಯಕ್ತಿಯೋರ್ವನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
  • ಕಾಪು ಪೊಲೀಸ್‌ ಠಾಣೆ ಪಿಎಸ್ಐ ಯವರಾದ ಸುಮಾ. ಬಿ ಅವರು ದಿನಾಂಕ: 13-04-2023 ರಂದು ಠಾಣೆಯಲ್ಲಿರುವ ಸಮಯ ಪಡು ಗ್ರಾಮದ ಕಾಪು ಪೇಟೆಯ ಮಾರುಕಟ್ಟೆ ಬಳಿ ಸಾವ೯ಜನಿಕ ಸ್ಥಳದಲ್ಲಿ ಓರ್ವ ಮಟ್ಕಾ ಜುಗಾರಿ ಆಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೊರೆತ ಖಚಿತ ಮಾಹಿತಿಯಂತೆ  ಕೂಡಲೇ ಠಾಣಾ ಸಿಬ್ಬಂದಿಗಳಾದ ಪಿಸಿ, ಪ್ರೇಮ್‌ ಕುಮಾರ್‌ ಪಿಸಿ , ಮಾಧವ ಹಾಗೂ ಇಲಾಖಾ ವಾಹನಚಾಲಕ ಎಪಿಸಿ ,ಸುನಿಲ್‌ ಅವರೊಂದಿಗೆ ಇಲಾಖಾ ವಾಹನದಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಓವ೯ ವ್ಯಕ್ತಿಯು 1 ರೂಪಾಯಿಗೆ 70 ರೂಪಾಯಿ ಎಂಬುದಾಗಿ ಕೂಗುತ್ತಿದ್ದು ಸಾವ೯ಜನಿಕರು ಆತನ ಸುತ್ತ ಸೇರಿರುವುದನ್ನು ಕಂಡು  ಸಿಬ್ಬಂದಿಗಳೊಂದಿಗೆ ಪಿಎಸ್ಐ ರವರು ಧಾಳಿ ನೆಡೆಸಿ  ಮಟ್ಕಾ ಜುಗಾರಿ ಆಡುತ್ತಿದ್ದ ಚಂದ್ರಹಾಸ(41) ವಾಸ:ಸಾಮಿಲ್‌ ತೋಟ ಪಡು ಗ್ರಾಮ ಕಾಪು  ತಾಲೂಕು ಎಂಬವನನ್ನು ಬಂಧಿಸಿ ವಶಕ್ಕೆ ಪಡೆದು ಆತನು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಬಾಲ್‌ ಪೆನ್-1‌, ಮಟ್ಕಾ ಚೀಟಿ-1 ಹಾಗೂ ಆಟದಿಂದ ಸಂಗ್ರಹಿಸಿದ 3,500/- ನಗದನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣೆಯಲ್ಲಿ ಕಲಂ: 78(I)(III)  ಕೆ. ಪಿ. ಆಕ್ಟ್  ರಂತೆ ಪ್ರಕರಣ ದಾಖಲಾಗಿದೆ.
error: No Copying!