ಕಾರ್ಕಳ: ದಿನಾಂಕ:11-04-2023(ಹಾಯ್ ಉಡುಪಿ ನ್ಯೂಸ್) ಜಾಗದ ವಿಚಾರದಲ್ಲಿ ಇರುವ ತಕರಾರಿಗಾಗಿ ಸಂಬಂಧಿಕನೋರ್ವ ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾನೆಂದು ದೂಪದ ಕಟ್ಟೆ ನಿವಾಸಿ ಕ್ರಷ್ಣಪ್ಪ ಅಮೀನ್ ಎಂಬವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕೃಷ್ಣಪ್ಪ ಅಮೀನ್ (60), ವಾಸ: ಕುಕ್ಕಾಬೆ ಹೌಸ್, ದೂಪದಕಟ್ಟೆ ಅಂಚೆ, ನಿಟ್ಟೆ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರಿಗೂ ದೂರದ ಸಂಬಂಧಿ ಆರೋಪಿ ವಿಶ್ವನಾಥ ಪೂಜಾರಿಗೂ ನಿಟ್ಟೆ ಗ್ರಾಮದ ಕುಕ್ಕಾಬೆ ಎಂಬಲ್ಲಿ ಜಾಗದ ವಿಚಾರದಲ್ಲಿ ತಕರಾರು ಇದೆ ಎನ್ನಲಾಗಿದ್ದು ;ಇದೇ ವಿಚಾರದಲ್ಲಿ ದಿನಾಂಕ 11/04/2023 ರಂದು ಬೆಳಿಗ್ಗೆ ಕ್ರಷ್ಣಪ್ಪ ಅಮೀನ್ ಸೈಕಲ್‌ನಲ್ಲಿ ಮನೆಯಿಂದ ನಿಟ್ಟೆ ಕಡೆಗೆ ಹೋಗುತ್ತಿರುವಾಗ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಲೆಮಿನಾ ಕ್ರಾಸ್ ಬಳಿ ತಲುಪುತ್ತಿದ್ದಾಗ ವಿಶ್ವನಾಥ ಪೂಜಾರಿಯು ತನ್ನ ಆಟೋ ರಿಕ್ಷಾದಲ್ಲಿ ಕ್ರಷ್ಣಪ್ಪ ಅಮೀನ್ ರ ಬಳಿ ಬಂದು ಆತನ ಆಟೋ ರಿಕ್ಷಾವನ್ನು ಅವರಿಗೆ ಅಡ್ಡವಾಗಿ ನಿಲ್ಲಿಸಿ ಸೈಕಲಿನಲ್ಲಿ ಮುಂದೆ ಹೋಗದಂತೆ ತಡೆದು ಬಳಿಕ ಏಕಾಎಕಿ ಅವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿ ಸೈಕಲಿನಲ್ಲಿ ಕುಳಿತ್ತಿದ್ದ ಕ್ರಷ್ಣಪ್ಪ ಅಮೀನ್ ರ ಬಲ ಕೈಯನ್ನು ಹಿಡಿದು ತಿರುಗಿಸಿ ಬಲವಾಗಿ ದೂಡಿದ್ದು, ಪರಿಣಾಮ ಅವರು ಸೈಕಲಿನಿಂದ ಕೆಳಗೆ ಬಿದ್ದಿದ್ದು ಅವರ ಬಲ ಕೈಗೆ ಗುದ್ದಿದ ನೋವು ಮತ್ತು ಬಲ ಕಾಲಿಗೆ ಗಾಯ ಆಗಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.