Spread the love

ಗಂಗೊಳ್ಳಿ: ದಿನಾಂಕ: 8-04-2023(ಹಾಯ್ ಉಡುಪಿ ನ್ಯೂಸ್) ಜಾಗದ ವಿಚಾರದಲ್ಲಿ ಇರುವ ವಿವಾದಕ್ಕೆ ಸಂಬಂಧ ಪಟ್ಟಂತೆ ಮೂರನೇ ವ್ಯಕ್ತಿಯೋರ್ವರಿಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.


ಡಾ, ಚಂದ್ರಶೇಖರ ಶೆಟ್ಟಿ, (80), ವಾಸ: ಭವಾನಿ ನಿಲಯ, ನೂಜಾಡಿ ಗ್ರಾಮ, ಕುಂದಾಪುರ ಎಂಬವರು ದಿನಾಂಕ 07/04/2023 ರಂದು ಡಾ, ಚಂದ್ರಶೇಖರ ಶೆಟ್ಟಿ ರವರ ಮನೆಯಲ್ಲಿ ಇರುವಾಗ ಪಕ್ಕದ ಮನೆಯ ಪ್ರಭಾವತಿ ಶೆಡ್ತಿ ಎಂಬವರು ಡಾ, ಚಂದ್ರಶೇಖರ ಶೆಟ್ಟಿ ಇವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಡಾ.ಚಂದ್ರಶೇಖರ ಶೆಟ್ಟಿಯವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಮನೆಯಿಂದ ಹೊರಗೆ ಬಾ ಎಂದು ಹೇಳಿದ್ದು ಆಗ ಡಾ, ಚಂದ್ರಶೇಖರ ಶೆಟ್ಟಿರವರು ಮನೆಯ ಹೊರಗೆ ಬಂದಾಗ ನೀನು ಆನಂದ ಶೆಟ್ಟಿಯವರಿಗೆ ಬೆಂಬಲ ಕೋಡುತ್ತೀಯಾ ಮುಂದಕ್ಕೆ ಆತನಿಗೆ ಬೆಂಬಲ ನೀಡಿದರೆ ನಿನ್ನನ್ನು ಹಾಗೂ ನಿನ್ನ ಹೆಂಡತಿಯನ್ನು ಕೊಲ್ಲದೇ ಬಿಡುವುದಿಲ್ಲ ಎಂಬುವುದಾಗಿ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಭಾವತಿ ಶೆಟ್ಟಿ ಹಾಗೂ ಆನಂದ ಶೆಟ್ಟಿ ಎಂಬವರಿಗೆ ಜಾಗದ ವಿಚಾರದಲ್ಲಿ ತಕರಾರು ಇದ್ದು ಇದೇ ವಿಚಾರಕ್ಕೆ ಡಾ, ಚಂದ್ರಶೇಖರ ಶೆಟ್ಟಿ ರವರು ಆನಂದ ಶೆಟ್ಟಿಯವರಿಗೆ ಬೆಂಬಲ ನೀಡಿರುವುದಾಗಿ ತಿಳಿದು  ಪ್ರಭಾವತಿ ಶೆಟ್ಟಿಯು ಡಾ, ಚಂದ್ರಶೇಖರ ಶೆಟ್ಟಿ ರವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!