Spread the love

ಕಾರ್ಕಳ: ದಿನಾಂಕ: 08-04-2023 (ಹಾಯ್ ಉಡುಪಿ ನ್ಯೂಸ್) ಕುಕ್ಕುಂದೂರು,ಜಾರ್ಕಳ ನಿವಾಸಿಯೊಬ್ಬರ ಹಿತಾಚಿ ವಾಹನಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ದಿನೇಶ್ ಶೆಟ್ಟಿ (47) ,ವಾಸ: ಸಾನಿಧ್ಯ ಜಾರ್ಕಳ ಕುಕ್ಕುಂದೂರು ಅಂಚೆ  ಕಾರ್ಕಳ ಎಂಬವರು ಕಾರ್ಕಳ ತಾಲೂಕು, ಕಲ್ಯಾ ಗ್ರಾಮದ ಸರ್ವೆ ನಂಬ್ರ  176/4 ರಲ್ಲಿ  ಪಟ್ಟಾಸ್ಥಳ ಹೊಂದಿದ್ದಾರೆ ಎಂದು ಕೊಂಡಿದ್ದು; ದಿನಾಂಕ 06/04/2023 ರಂದು ಸಂಜೆ ಈ ಜಾಗದಲ್ಲಿ ತಾನು ಹೊಸ ಕ್ರಶರ್ ಪ್ರಾರಂಬಿಸಲು ಸ್ಥಳ ಸಮತಟ್ಟು ಮಾಡುವ ಉದ್ದೇಶದಿಂದ ತನ್ನ ಮಾಲಿಕತ್ವದ ಟಾ ಟಾ ಹಿಟಾಚಿ ಯಂತ್ರವನ್ನು ನಿಲ್ಲಿಸಿದ್ದು, ದಿನಾಂಕ 07/04/2023 ರಂದು ಬೆಳಿಗ್ಗೆ ಬಂದು ನೋಡಿದಾಗ ಯಾರೋ ಕಿಡಿಗೇಡಿಗಳು ಹಿಟಾಚಿ ಯಂತ್ರಕ್ಕೆ ಬೆಂಕಿ ಕೊಟ್ಟಿದ್ದು, ಯಂತ್ರವು ಸುಟ್ಟು ಕರಕಲಾಗಿದ್ದು,  ಸುಮಾರು 15 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ದೂರು ನೀಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!