Spread the love

ಕೋಟ: ದಿನಾಂಕ 10/04/2023 (ಹಾಯ್ ಉಡುಪಿ ನ್ಯೂಸ್) ಸಾಲಿಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ಸಾರ್ವಜನಿಕರನ್ನು ಆಹ್ವಾನಿಸುತ್ತಿದ್ದ ಐವರು ಯುವಕರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ಬ್ರಹ್ಮಾವರ  ವೃತ್ತ, ಪೊಲೀಸ್ ವ್ರತ್ತ ನಿರೀಕ್ಷಕರಾದ ದಿವಾಕರ ಪಿ.ಎಂ. ರವರು ದಿನಾಂಕ 8-04-2023 ರಂದು ಸಿಬ್ಬಂದಿಯವರೊಂದಿಗೆ  ರೌಂಡ್ಸ್ ಕರ್ತವ್ಯದಲ್ಲಿ ಕೋಟ  ಕಡೆಗೆ  ಬರುತ್ತಿರುವಾಗ  ಸಾಲಿಗ್ರಾಮದ  ಪಶ್ಚಿಮ  ಬದಿಯ  ಸರ್ವಿಸ್‌‌‌‌‌‌‌‌‌‌‌ರಸ್ತೆಯಲ್ಲಿ  ಎರಡು  ಕಾರುಗಳು  ನಿಂತಿದ್ದು,  ಎರಡೂ  ಕಾರಿನ ಸುತ್ತಲೂ 4  -5  ಜನರು ಸುತ್ತುವರಿದು  ನಿಂತಿದ್ದು.  ಕಾರಿನಲ್ಲಿದ್ದವರು   ಮೊಬೈಲ್‌‌‌‌‌‌ನ್ನು  ಹಿಡಿದುಕೊಂಡು  ಲೋಟಸ್,  ಪಾರ್ಕರ್ ಇನ್ನೂ  ಮುಂತಾದ  ವೆಬ್ ಸೈಟ್ ನ ಮೂಲಕ ಕ್ರಿಕೆಟ್‌‌‌ ಬೆಟ್ಟಿಂಗ್‌‌‌ನಲ್ಲಿ  ಹಣ ಹಾಕಿದರೆ ಹೆಚ್ಚು  ಹಣ ಕೊಡುವುದಾಗಿ ಸಾರ್ವಜನಿಕರಿಗೆ  ಹೇಳಿ ಅವರ ಮೊಬೈಲ್ ಗಳಲ್ಲಿ ಐಡಿ ಕ್ರಿಯೇಟ್ ಮಾಡಿ ಕ್ರಿಕೆಟ್ ಬೆಟ್ಟಿಂಗ್  ಜೂಜಾಟ  ನಡೆಸುತ್ತಿರುವುದು ಕಂಡು ಬಂದಿದ್ದು, ಅಲ್ಲಿಗೆ ದಾಳಿ ನಡೆಸಿ ಮೊಬೈಲ್ ಜೂಜಾಟದಲ್ಲಿ ನಿರತರಾಗಿದ್ದ 5 ಜನ ಆರೋಪಿಗಳಾದ 1) ತೇಜಸ್ ಯಾನೆ ತೇಜ ಶೆಟ್ಟಿ ,ಪ್ರಾಯ 25 ವರ್ಷ ವಾಸ: 2-387 ಧರ್ಮ ದೇವ ಕಂಪೌಂಡ್ ವಾರಾಹಿ ರಸ್ತೆ ಜಾನಕಿ ರಾಮ್ ನರ್ಸಿಂಗ್ ಹೋಮ್  ಸಿದ್ದಾಪುರ ತಾ ಕುಂದಾಪುರ 2) ಕರ್ತವ್ಯ ಶೆಟ್ಟಿ ಪ್ರಾಯ 24 ವರ್ಷ , ವಾಸ: ಸಾದನಾ ನಿಲಯ ಮರವಂತೆ ಅರೆಹೊಳೆ ಕ್ರಾಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಮರವಂತೆ ಕುಂದಾಪುರ ತಾಲೂಕು 3) ಸುದರ್ಶನಶೆಟ್ಟಿ ಪ್ರಾಯ 26 ವರ್ಷ ,ವಾಸ: ಶ್ರೀ ಗುರು ರಾಘವೇಂದ್ರ ನಿಲಯ ಗುಡ್ಡೆಯಂಗಡಿ ಮೀನು ಮಾರುಕಟ್ಟೆಯ ಬಳಿ ನಾಡ ಕುಂದಾಪುರ ತಾಲೂಕು 4) ಪವನ್ ಶೆಟ್ಟಿ  ಪ್ರಾಯ 25 ವರ್ಷ ,ಪೂರ್ಣಶ್ರೀ ನಿಲಯ ಗುಡ್ಡೆಯಂಗಡಿ ಚಂದ್ರಿಕಾ ಬಾರ್ ಬಳಿ ನಾಡ ಕುಂದಾಪುರ ತಾಲೂಕು  5) ಪವನ್ ಕುಮಾರ್ ಶೆಟ್ಟಿ ಪ್ರಾಯ  26 ಷರ್ವ , ವಾಸ: ಶ್ರೀ ಮೂಕಾಂಬಿಕಾ ನಿಲಯ ನಾಡ ಗುಡ್ಡೆಯಂಗಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ನಾಡ ಕುಂದಾಪುರ ತಾಲೂಕು     ಹಾಗೂ 2 ಕಾರು ಹಾಗೂ 10 ಮೊಬೈಲ್ ಹಾಗೂ ಮೊಬೈಲ್  ಜೂಜಾಟಕ್ಕೆ ಬಳಸಿದ 26000/- ಹಣವನ್ನು  ಪೊಲೀಸರು ಸ್ವಾಧಿನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ   ಕಲಂ: 78(1)(3) KP ACT ರಂತೆ ಪ್ರಕರಣ ದಾಖಲಾಗಿದೆ.

error: No Copying!