ಮಣಿಪಾಲ: ದಿನಾಂಕ : 06/04/2023 (ಹಾಯ್ ಉಡುಪಿ ನ್ಯೂಸ್) ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಯುವಕನೋರ್ವನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನಿಧಿ ಬಿ ಎನ್ ರವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಪ್ರಥಮ ಕೃಷ್ಣ ಅಪಾರ್ಟ್ಮೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಮಲಿನಲ್ಲಿದ್ದ ದಿಲೀಪ್ ಶೆಟ್ಟಿ (21) ಎಂಬಾತನನ್ನು ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ ಬಂಧಿಸಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ವೈದ್ಯಾಧಿಕಾರಿಗಳು ದಿನಾಂಕ 05/04/2023 ರಂದು ದಿಲೀಪ್ ಶೆಟ್ಟಿ ಗಾಂಜಾ ಸೇವನೆ ಮಾಡಿದ್ದ ಬಗ್ಗೆ ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಆತನ ಮೇಲೆ ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.