ಉಡುಪಿ: ದಿನಾಂಕ: 06-04-2023(ಹಾಯ್ ಉಡುಪಿ ನ್ಯೂಸ್) ಬಜತ್ತೂರು ನಿವಾಸಿ ನವೀನ್ ಆಚಾರ್ಯ ಎಂಬವರಿಗೆ ಉಡುಪಿ ಆಭರಣ ಜ್ಯುವೆಲ್ಲರಿ ಶಾಪ್ ಬಳಿ ವ್ಯಕ್ತಿ ಯೋರ್ವ ತಡೆದು ನಿಲ್ಲಿಸಿ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ದೂರು ದಾಖಲಾಗಿದೆ.
ನೀರಕಟ್ಟೆ, ವಲಾಲ್ ಅಂಚೆ, ಬಜತ್ತೂರು, ದ.ಕ ಜಿಲ್ಲೆಯ ನಿವಾಸಿ ನವೀನ್ ಆಚಾರ್ಯ(39) ಎಂಬವರಿಗೆ ದಿನಾಂಕ: 04/04/2023 ರಂದು ಬೆಳಿಗ್ಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಉಡುಪಿ ಆಭರಣ ಜುವೆಲ್ಲರಿ ಶಾಪ್ ಬಳಿ ಆಪಾದಿತ ಸಂಪತ್ ಎಂಬಾತನು ಅಡ್ಡಗಟ್ಟಿ, ಜೀವ ಬೆದರಿಕೆ ಹಾಕಿರುತ್ತಾನೆ ಎಂದು ನವೀನ್ ಆಚಾರ್ಯ ಎಂಬವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸಂಪತ್ ಎಂಬಾತನ ಮೇಲೆ ಪ್ರಕರಣ ದಾಖಲಾಗಿರುತ್ತದೆ.