Spread the love
  • ಮಣಿಪಾಲ: ದಿನಾಂಕ: 6-04-2023(ಹಾಯ್ ಉಡುಪಿ ನ್ಯೂಸ್) ಮಣಿಪಾಲದ ಸಾರ್ವಜನಿಕ ಸ್ಥಳದಲ್ಲಿ ರಾತ್ರಿ ಗಾಂಜಾ ಸೇವನೆ ಮಾಡಿದ್ದ ಮೂವರು ಯುವಕರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
  • ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರುಕ್ಮಾ ನಾಯ್ಕ್ ರವರು   ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲದ IRIS PLAZA NEAR BARRALS ಬಳಿಯ ಸಾರ್ವಜನಿಕ ಸ್ಥಳದಲ್ಲಿ ತೂರಾಡುತ್ತಿದ್ದ ಆನಂದ್‌ ಶಂಕರ್‌ D.S (20) , ವಿಷ್ಣು ವಿನು (19), ದೇವ ನಾರಾಯಣ ಎ (20) ಎಂಬವರನ್ನು ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ ಬಂಧಿಸಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಪರೀಕ್ಷಿಸಲು ಹಾಜರುಪಡಿಸಿದ್ದು ವೈದ್ಯಾಧಿಕಾರಿಗಳು  ದಿನಾಂಕ 05/04/2023 ರಂದು ಈ ಮೂವರೂ ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಢಪತ್ರವನ್ನು ನೀಡಿದ್ದು ; ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಈ ಮೂವರ ಮೇಲೆ ಕಲಂ: 27(b) NDPS Act  ರಂತೆ ಪ್ರಕರಣ ದಾಖಲಾಗಿರುತ್ತದೆ.
error: No Copying!