Spread the love

ಬ್ರಹ್ಮಾವರ: ದಿನಾಂಕ:3-03-2023(ಹಾಯ್ ಉಡುಪಿ ನ್ಯೂಸ್) ಆರೂರು ಗ್ರಾಮದ ಜೆಪಿ ನಗರದಲ್ಲಿ ಕಳ್ಳನೋರ್ವ ಮಾಡಿನ ಹೆಂಚು ತೆಗೆದು ಕಳ್ಳತನಕ್ಕೆ ವಿಫಲ ಯತ್ನವನ್ನು ನಡೆಸಿದ ಘಟನೆ ನಡೆದಿದೆ.

ಉಮೇಶ ನಾಯ್ಕ (42), ವಾಸ : ಆರೂರು. ಜೆಪಿ ನಗರ, ಆರೂರು ಗ್ರಾಮ ಬ್ರಹ್ಮಾವರ ತಾಲೂಕು ಇವರು ಮನೆಯಲ್ಲಿ ಮಲಗಿರುವಾಗ ದಿನಾಂಕ 02/04/2023 ರಂದು ಬೆಳಿಗ್ಗಿನ ಜಾವ 02:00 ಗಂಟೆಗೆ ಮನೆಯ ಮಾಡಿನಲ್ಲಿ ಏನೋ ಶಬ್ದವಾಗಿದ್ದು ಉಮೇಶ ನಾಯ್ಕ ಮತ್ತು ಅವರ ಹೆಂಡತಿ  ಎಚ್ಚರವಾಗಿ ನೋಡಿದಾಗ ಮನೆಯ ಶೌಚಾಲಯದ ಮಾಡಿನ ಮೇಲೆ  ಇರುವ ಹಂಚನ್ನು ಯಾರೋ ಒಬ್ಬ ವ್ಯಕ್ತಿಯು ತೆಗೆಯುತ್ತಿದ್ದು ಮನೆಯ ಒಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದುದ್ದನ್ನು ನೋಡಿ ಉಮೇಶ ನಾಯ್ಕ ಬೊಬ್ಬೆ  ಹಾಕಿದಾಗ ಆ ವ್ಯಕ್ತಿಯು ಮಾಡಿನಿಂದ ಹಾರಿ ಅಲ್ಲಿಂದ ಓಡಿ ಹೋಗಿದ್ದುದನ್ನು ಮನೆಯ ಕಿಟಕಿಯಿಂದ  ನೋಡಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅತನು ಒಳ ಬನಿಯಾನ್‌ ಮತ್ತು ಪ್ಯಾಂಟ್‌ ಧರಿಸಿರುತ್ತಾನೆ. ನಂತರ ಉಮೇಶ ನಾಯ್ಕರವರು ಮನೆಯ ಎದುರಿನ ಬಾಗಿಲು ತೆಗೆದು ಲೈಟ್‌ ಹಾಕಿ ನೋಡಿದಾಗ ಮನೆಯ ಹೊರಗೆ ಅಂಗಳದಲ್ಲಿ ಒಂದು ಮೆರೂನ್‌ ಬಣ್ಣದ ಜರ್ಕಿನ್‌ ಹಾಗೂ ನೀಲಿ ಬಣ್ಣದ ಅಂಗಿ ಸಿಮೇಂಟ್‌ ಶೀಟಿನ ತಗಡಿನ ಮೇಲೆ ಇದ್ದಿದ್ದು, ಅಲ್ಲೆ ಹತ್ತಿರದಲ್ಲಿ ಒಂದು ಜೊತೆ ಕಪ್ಪು ಬಣ್ಣದ ಚಪ್ಪಲಿ ಇತ್ತೆಂದು ದೂರಿದ್ದಾರೆ.  ಆ ವ್ಯಕ್ತಿಯು ಉಮೇಶ್ ನಾಯ್ಕರ ಮನೆಯ ಮಾಡಿನ ಹಂಚನ್ನು ತೆಗೆದು ಒಳಗೆ ಪ್ರವೇಶಿಸಿ ರಾತ್ರಿ  ಕಳ್ಳತನ ಮಾಡಲು ಪ್ರಯತ್ನಿಸಿದ್ದನೆಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!