ಹಿರಿಯಡ್ಕ: ದಿನಾಂಕ 04-04-2023(ಹಾಯ್ ಉಡುಪಿ ನ್ಯೂಸ್) ಅನಧಿಕೃತವಾಗಿ ತಂಬಾಕು ಉತ್ಪನ್ನಗಳನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಹಿರಿಯಡ್ಕ ಠಾಣಾ ಪಿ.ಎಸ್.ಐ ಅನಿಲ್.ಬಿ.ಎಂ ರವರು ದಿನಾಂಕ:04/04/2023 ರಂದು ಅಂಜಾರು ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾ.ಹೆದ್ದಾರಿ 169(ಎ) ರಲ್ಲಿ ಹಿರಿಯಡಕ ಕಡೆಯಿಂದ ಉಡುಪಿ ಕಡೆಗೆ ಬಂದ KA 19 MG 5434 ನೇ ಬಿಳಿ ಬಣ್ಣದ ಮಾರುತಿ ಓಮ್ನಿ ವಾಹನವನ್ನು ತಡೆದು ಪರಿಶೀಲಿಸಿದಾಗ ಕಾರಿನಲ್ಲಿ 27 ಕೆ.ಜಿ 520 ಗ್ರಾಂ ತಂಬಾಕು ಕಂಡುಬಂದಿರುತ್ತದೆ.
ತಂಬಾಕಿನ ಅಂದಾಜು ಮೌಲ್ಯ ರೂ: 20 ಸಾವಿರ ಆಗಬಹುದು ಎಂದು ಅಂದಾಜಿಸಲಾಗಿದೆ ..ಓಮ್ನಿ ವಾಹನದ ಚಾಲಕನನ್ನು ಪೊಲೀಸರು ವಿಚಾರಿಸಿದಾಗ ಆತನ ಹೆಸರು ಪ್ರಕಾಶ್, ವಿಳಾಸ: ಹೊಸ್ಮಾರು, ಈದು ಗ್ರಾಮ, ಕಾರ್ಕಳ ತಾಲೂಕು,ಎಂಬುದಾಗಿ ತಿಳಿಸಿದ್ದು, ಈ ತಂಬಾಕನ್ನು ಸಾಗಾಟ ಮಾಡಲು ಯಾವುದೇ ದಾಖಲಾತಿಗಳು ಇರುವುದಿಲ್ಲವೆಂದು ಪೊಲೀಸ್ ವಿಚಾರಣೆಯಲ್ಲಿ ತಿಳಿಸಿರುತ್ತಾನೆ ಎನ್ನಲಾಗಿದೆ. ಆತನು ಪರವಾನಿಗೆ/ದಾಖಲೆ ಇಲ್ಲದೇ ಅನುಮಾನಾಸ್ಪದವಾಗಿ ತಂಬಾಕು ಸಾಗಾಟ ಮಾಡುತ್ತಿದ್ದ ಕಾರಣ ಕಾರಿನಲ್ಲಿದ್ದ ತಂಬಾಕನ್ನು, ತಂಬಾಕನ್ನು ಸಾಗಾಟ ಮಾಡುತ್ತಿದ್ದ ಮಾರುತಿ ಓಮ್ನಿ ವಾಹನವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ