ಕೋಟ: ದಿನಾಂಕ 31/03/2023 (ಹಾಯ್ ಉಡುಪಿ ನ್ಯೂಸ್) ಸಾಸ್ತಾನ ಪೇಟೆಯಲ್ಲಿ ಮಟ್ಕಾ ಜುಗಾರಿ ಬರೆಯುತ್ತಿದ್ದ ವ್ಯಕ್ತಿ ಯನ್ನು ಕೋಟ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ಕಾನೂನು ಮತ್ತು ಸುವ್ಯವಸ್ಥೆ) ಮಧು ಬಿ.ಇ, ಅವರಿಗೆ ದಿನಾಂಕ 30-03-2023 ರಂದು ಬ್ರಹ್ಮಾವರ ತಾಲೂಕು ಗುಂಡ್ಮಿ ಗ್ರಾಮದ ಸಾಸ್ತಾನ ಪೇಟೆಯಲ್ಲಿರುವ ಗೂಡಂಗಡಿಯ ಸಮೀಪ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೋರ್ವ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದ ಕೂಡಲೇ ಅಲ್ಲಿಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದ ವಿಶ್ವನಾಥ ದೇವಾಡಿಗ (40), ವಾಸ:ಹಾಡಿಕೆರೆ ಬೆಟ್ಟು ಕೋಟ ಗಿಳಿಯಾರು ಗ್ರಾಮ ಬ್ರಹ್ಮಾವರ ತಾಲೂಕು ಎಂಬವನನ್ನು ಬಂಧಿಸಿ ವಶಕ್ಕೆ ಪಡೆದು ಅವನ ಬಳಿ ಜುಗಾರಿ ಆಟಕ್ಕೆ ಬಳಸಿದ ನಗದು ಒಟ್ಟು 1,500/- ರೂಪಾಯಿ ಹಾಗೂ ಮಟ್ಕಾ ಚೀಟಿ ಮತ್ತು ಆತನ ಶರ್ಟ್ ಕಿಸೆಯಲ್ಲಿ ಇದ್ದ ಬಾಲ್ ಪೆನ್ ಅನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.